September 28, 2026
Monday, September 28, 2026
spot_img

ಧಾರವಾಡ ಕಾರಾಗೃಹಕ್ಕೆ ಡಿಜಿಪಿ ಅಲೋಕ್ ಕುಮಾರ್ ಭೇಟಿ, ಅಧಿಕಾರಿಗಳಿಗೆ ಎಚ್ಚರಿಕೆ

ಹೊಸದಿಗಂತ ವರದಿ ಧಾರವಾಡ:

ರಾಜ್ಯ ಕಾರಾಗೃಹ-ಸುಧಾರಣಾ ಸೇವಾ ಇಲಾಖೆಯ ಮಹಾನಿರ್ದೇಶಕ ಅಲೋಕ್ ಕುಮಾರ್, ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಜೈಲಿನ ಒಳಗಿನ ಭದ್ರತೆ ಹಾಗೂ ಖೈದಿಗಳಿಗೆ ನೀಡುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿಪಿ ಅಲೋಕ್ ಕುಮಾರ್, ಕಾರಾಗೃಹದಲ್ಲಿ ಪಾರದರ್ಶಕತೆ, ಶಿಸ್ತು ಕಾಪಾಡುವುದು ಮೊದಲ ಆದ್ಯತೆ. ಜೈಲಿನಲ್ಲಿ ಗಾಂಜಾ, ಡ್ರಗ್ಸ್, ಅಫೀಮು, ಮೊಬೈಲ್, ನಿಷೇಧೀತ ವಸ್ತುಗಳನ್ನು ನಿಯಂತ್ರಿಸಲು ತಾಕೀತು ಮಾಡಿದೆ ಎಂದರು.

ಗುಮಾನಿ, ಸಂಶಯಾಸ್ಪದ ಹೊಸ ಖೈದಿಗಳ ಬಂದಾಗ ಮತ್ತು ಬಿಡುಗಡೆಗೊಳ್ಳು ಕೈದಿಗಳನ್ನು ಮಾದಕ ವಸ್ತುಗಳ ಸೇವನೆ ಕುರಿತು ತಪಾಸಣೆಗೆ ಒಳಪಡಿಸಲಿದೆ. ನಿಷೇಧಿತ ವಸ್ತುಗಳು ಜೈಲಿಗೆ ಸರಬರಾಜಾಗದಂತೆ ಹದ್ದಿನ ಕಣ್ಣಿಡಲು ಸಿಬ್ಬಂದಿಗೆ ಸೂಚಿಸಿದ್ದಾಗಿ ತಿಳಿಸಿದರು.

ಜೈಲಿನ ನಿಯಮಗಳು ಉಲ್ಲಂಘಿಸುವ ಸಿಬ್ಬಂದಿ ಹಾಗೂ ಖೈದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಲಿಸುವ ಎಚ್ಚರಿಸಿದ ಡಿಜಿಪಿ, ಅಲೋಕ್ ಕುಮಾರ್, ಜೈಲಿನಲ್ಲಿ ಅಳವಡಿಸಿದ ಜಾಮರ್‌ನಿಂದ ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

Must Read