September 28, 2026
Monday, September 28, 2026
spot_img

ಫಲಿಸಲಿಲ್ಲ ಪ್ರಾರ್ಥನೆ: ಹತ್ತು ಗಂಟೆಗಳ ಕಾರ್ಯಾಚರಣೆ ವಿಫಲ, ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಗು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಂಡೀಗಢದ ಫರಿದಾಬಾದ್‌ನ ಸೀಹಿ ಗ್ರಾಮದಲ್ಲಿ ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಕಂದಮ್ಮ ನೇಹಾ ಇಂದು ಬೆಳಗ್ಗೆ ಉಸಿರುಚೆಲ್ಲಿದೆ.

250 ಅಡಿ ಆಳದ ಕೊಳವೆ ಬಾವಿಗೆ ಮಗು ಬಿದ್ದಿದ್ದು, ಆಕೆಯನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆದಿತ್ತು. ಬರೋಬ್ಬರು ಹತ್ತು ಗಂಟೆಗಳ ಕಾಲ ಕಾರ್ಯಾಚರಣೆ ನಡೆದಿದ್ದು, ಇಂದು ಮುಂಜಾನೆ ಮಗು ಮೃತಪಟ್ಟಿರುವ ಮಾಹಿತಿ ಹೊರಬಿದ್ದಿದೆ.

ಇತರೆ ಮಕ್ಕಳ ಜೊತೆ ನೇಹಾ ಆಟ ಆಡುತ್ತಿದ್ದಳು. ಪೋಷಕರು ಆಕೆ ಮಕ್ಕಳ ಜೊತೆ ಆಟವಾಡುತ್ತಿದ್ದಾಳೆ ಏನೂ ತೊಂದರೆ ಇಲ್ಲ ಎಂದು ನಿರಾಳವಾಗಿದ್ದರು. ಆದರೆ ಮಗು ಆಡುತ್ತಾ ಕೊಳವೆ ಬಾವಿಗೆ ಬಿದ್ದಿದೆ. ತಕ್ಷಣ ಉಳಿದ ಮಕ್ಕಳು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ/ ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ರಕ್ಷಣಾ ಕಾರ್ಯಾಚರಣೆ ಸಂಪೂರ್ಣವಾಗಿದೆ. ಮಗು ನೇಹಾಳನ್ನು ಹೊರಕ್ಕೆ ತೆಗೆದಾಗ ಆಕೆಯ ದೇಹದಲ್ಲಿ ಯಾವುದೇ ರೀತಿಯ ಚಲನವಲನ ಇರಲಿಲ್ಲ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಗು ಮೃತಪಟ್ಟಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇಡೀ ಊರಿಗೇ ಊರೇ ಮಗು ಉಳಿಯಲಿ ಎಂದು ಪ್ರಾರ್ಥಿಸಿದ್ದರು. ಆದರೆ ಯಾರ ಪ್ರಾರ್ಥನೆಯೂ ಭಗವಂತನ ಬಳಿಗೆ ಮುಟ್ಟಲೇ ಇಲ್ಲ!

Must Read