July 18, 2026
Saturday, July 18, 2026
spot_img

ಸಾರಿಗೆ ನೌಕರರೇ ಸರ್ಕಾರದ ಪರಿಸ್ಥಿತಿ ಅರ್ಥಮಾಡ್ಕೊಳ್ರಪ್ಪ, ಮುಷ್ಕರ ಕೈಬಿಡಿ: ಡಿಕೆಶಿ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾರಿಗೆಯವರು ಸರ್ಕಾರದ ಪರಿಸ್ಥಿತಿಯನ್ನೂ ಅರ್ಥ ಮಾಡ್ಕೋಬೇಕು. ದಯವಿಟ್ಟು ಇದನ್ನೆಲ್ಲ ಬಿಟ್ಟು ಕೆಲಸ ಮಾಡಿ, ನಮಗೆ ಸಹಕರಿಸಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಮನವಿ ಮಾಡಿದ್ದಾರೆ.

ಈಗ ಆಫರ್‌ ಮಾಡಿರೋದು ಕಡಿಮೆ ಏನಿಲ್ಲ. ಸದ್ಯದ ಪರಿಸ್ಥಿತಿಗೆ ಅದು ಖುಷಿ ಪಡುವ ಮೊತ್ತವೇ ಅದನ್ನು ಬಿಟ್ಟು ಇನ್ನೂ ಮುಷ್ಕರ ಅಂದ್ರೆ ಹೇಗೆ? ಎಂದಿದ್ದಾರೆ.

ಇನ್ನು ಬೆಂಗಳೂರು ಕಸ ವಿಲೇವಾರಿ ಬಗ್ಗೆ ಮಾತನಾಡಿ, ಯಾರು ಕಸ ಹಾಕಲು ಬಿಡಲ್ಲ ಅವರ ಕ್ಷೇತ್ರದಲ್ಲಿ ಕಸ ಎತ್ತಿಸಲ್ಲ. ಆಗ ಜನರೇ ಅವರಿಗೆ ಉಗಿಯುತ್ತಾರೆ. ಕಸ ಡಂಪ್ ಮಾಡಿಸಲು ಕಾಲು ಮುಗಿಯುವುದಕ್ಕೆ ಆಗುತ್ತಾ? ಕಸ ಎಲ್ಲಾದ್ರೂ ಹಾಕಬೇಕಾಲ್ವಾ, ಎಲ್ಲಿ ಹಾಕಬೇಕು. ಮೊದಲಿನಿಂದಲೂ ಎಲ್ಲಿ ಸಂಪ್ರದಾಯದಂತೆ ಹಾಕ್ತಿವೋ ಅಲ್ಲಿ ಹಾಕ್ತಿವಿ.

ಡೆವೆಲಪ್ಮೆಂಟ್‌ಗೆ ಸಾಕಷ್ಟು ಹಣ ಕೊಟ್ಟಿದ್ದೀವಿ. ಹೆಚ್ಚಿಗೆ ಕೇಳಿದ್ರೆ ಎಷ್ಟು ಅಂತ ಕೊಡುವುದಕ್ಕೆ ಆಗುತ್ತದೆ? ಅವರು ಅರ್ಥ ಮಾಡಿಕೊಳ್ಳಬೇಕು, ಲಾರಿಗಳು ಎಲ್ಲಿ ಹೋಗ್ತಾವೆ. ಬೇರೆ ಕಡೆ ನಾಲ್ಕು ಡಂಪಿಂಗ್ ಯಾರ್ಡ್ ಮಾಡಲು ಶಾಶ್ವತವಾಗಿ ಜಾಗ ನೋಡ್ತಿದ್ದೀವಿ. ಎರಡು ಕಡೆ ಜಾಗ ಫೈನಲ್ ಆಗಿದೆ. ಇದೆಲ್ಲ ಯಾರ ಕಸ? ಜನರ ಕಸ ಅಲ್ವಾ ಎಂದು ಗರಂ ಆದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !