July 18, 2026
Saturday, July 18, 2026
spot_img

ಕನ್ನಡದ ಖದರ್ ಹೆಚ್ಚಿಸಿದ ‘ಮಿಥ್ಯ’, ತುಳು ಚಿತ್ರರಂಗಕ್ಕೆ ಬೂಸ್ಟರ್ ಡೋಸ್ ನೀಡಿದ ‘ಇಂಬು’: ರಾಷ್ಟೀಯ ಮಟ್ಟದಲ್ಲಿ ಮಿಂಚಿದ ಶೆಟ್ರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇಂದು ಘೋಷಣೆಯಾದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಕನ್ನಡ, ತುಳು ಚಿತ್ರರಂಗದ ಮುಕುಟಕ್ಕೆ ಮತ್ತಷ್ಟು ಗರಿ ಹೆಚ್ಚಿಸಿದೆ.

ಈ ಪೈಕಿ ರಕ್ಷಿತ್ ಶೆಟ್ಟಿ ಅವರ ಪರಂವಾ ಪಿಕ್ಚರ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸಿರುವ, ಸುಮಂತ್ ಭಟ್ ನಿರ್ದೇಶನದ ‘ಮಿಥ್ಯ’ ಚಿತ್ರ ಮೂರು ಪ್ರಮುಖ ರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ದೇಶದ ಗಮನ ಸೆಳೆದಿದೆ.

‘ಮಿಥ್ಯ’ಗೆ ಮೂರು ರಾಷ್ಟ್ರೀಯ ಪ್ರಶಸ್ತಿಗಳು

‘ಮಿಥ್ಯ’ ಚಿತ್ರವು ಈ ಬಾರಿ ಮೂರು ವಿಭಾಗಗಳಲ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರ, ಅತ್ಯುತ್ತಮ ಪೋಷಕ ನಟಿ (ರೂಪಶ್ರೀ ವರ್ಕಾಡಿ), ಅತ್ಯುತ್ತಮ ಬಾಲ ಕಲಾವಿದ (ಅಥೀಶ್ ಎಸ್. ಶೆಟ್ಟಿ) ಜಂಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದು ಭರ್ಜರಿ ಸಾಧನೆ ಮಾಡಿದೆ. ಬಾಲಕನ ಮನಸ್ಥಿತಿ, ಕುಟುಂಬ, ಕಳೆದುಕೊಳ್ಳುವ ನೋವು ಮತ್ತು ಜೀವನದ ಭಾವನಾತ್ಮಕ ಪಯಣವನ್ನು ಅತ್ಯಂತ ನೈಜವಾಗಿ ಚಿತ್ರಿಸಿರುವುದಕ್ಕಾಗಿ ‘ಮಿಥ್ಯ’ ಚಿತ್ರಕ್ಕೆ ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಕ್ಷಿತ್ ಶೆಟ್ಟಿಗೆ ಮತ್ತೊಂದು ಹೆಮ್ಮೆಯ ಕ್ಷಣ

ಕನ್ನಡದಲ್ಲಿ ವಿಭಿನ್ನ ಕಥಾಹಂದರದ ಸಿನಿಮಾಗಳಿಗೆ ಹೆಸರಾಗಿರುವ ರಕ್ಷಿತ್ ಶೆಟ್ಟಿ, ನಿರ್ಮಾಪಕರಾಗಿ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಪರಂವಾ ಪಿಕ್ಚರ್ಸ್ ಬ್ಯಾನರ್‌ಗೆ ಇದು ಮತ್ತೊಂದು ದೊಡ್ಡ ಗೌರವವಾಗಿದೆ.

ತುಳು ಚಿತ್ರರಂಗಕ್ಕೂ ಈ ಬರಿ ಪ್ರಶಸ್ತಿ ಬಸ್ಟರ್ ಡೋಸ್ ನೀಡಿದ್ದು, ‘ಇಂಬು’ ಚಿತ್ರ ಅತ್ಯುತ್ತಮ ತುಳು ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದೆ.

ಇದನ್ನೂ ಓದಿ:

ದಕ್ಷಿಣದ ಸಿನಿಮಾಗಳ ಭರ್ಜರಿ ಪ್ರದರ್ಶನ

ಕನ್ನಡದ ‘ಮಿಥ್ಯ’ ಸಿನಿಮಾದೊಂದಿಗೆ ದಕ್ಷಿಣ ಭಾರತದ ಇತರೆ ಚಿತ್ರಗಳೂ ಸಹ ಈ ಬಾರಿ ರಾಷ್ಟ್ರ ಮಟ್ಟದಲ್ಲಿ ಭಾರಿ ಕಮಾಲ್ ಮಾಡಿವೆ. ಮಲಯಾಳಂ ಚಿತ್ರರಂಗದ ದೈತ್ಯ ನಟ ಮಮ್ಮುಟ್ಟಿ ತಮ್ಮ ಅತ್ಯುತ್ತಮ ನಟನೆಗಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ನಟನೆಯ ಸೈನ್ಸ್ ಫಿಕ್ಷನ್ ದೃಶ್ಯ ವೈಭವದ ‘ಕಲ್ಕಿ 2898 ಎಡಿ’ ಚಿತ್ರಕ್ಕೆ ‘ಅತ್ಯುತ್ತಮ ಮನರಂಜನಾ ಸಿನಿಮಾ’ ಪ್ರಶಸ್ತಿ ಒಲಿದಿದೆ.

ರಾಷ್ಟ್ರ ಪ್ರಶಸ್ತಿಯ ಇತಿಹಾಸದಲ್ಲಿ ಪ್ರತಿ ಬಾರಿಯೂ ಕನ್ನಡದ ಸಿನಿಮಾಗಳು ಜಾಗತಿಕ ಮಟ್ಟದ ಕಥೆಗಳ ಮೂಲಕ ಗಮನ ಸೆಳೆಯುತ್ತಿದ್ದು, ಈ ಬಾರಿಯೂ ‘ಮಿಥ್ಯ’ ಚಿತ್ರದ ಮೂಲಕ ಕನ್ನಡದ ಪಾರುಪತ್ಯ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !