August 31, 2026
Monday, August 31, 2026
spot_img

ಬೆಳಂಬಾರ ಕಡಲ ತೀರದ ಬಂಡೆಗಳ ಮೇಲೆ ಅಪರೂಪದ ‘ಓಶಿಯನ್ ಹಂಪ್‌ಬ್ಯಾಕ್’ ಜಾತಿಯ ಡಾಲ್ಫಿನ್ ಕಳೆಬರ ಪತ್ತೆ!

ಹೊಸದಿಗಂತ ವರದಿ ಅಂಕೋಲಾ:

ಅಂಕೋಲಾ:ತಾಲೂಕಿನ ಬೆಳಂಬಾರ ಕಡಲ ತೀರದ ಬಂಡೆಯ ಮೇಲೆ ಓಶಿಯನ್ ಹಂಪ್ ಬ್ಯಾಕ್ ಜಾತಿಗೆ ಸೇರಿದ ಡಾಲ್ಪಿನ್ ಕಳೆಬರ ಪತ್ತೆಯಾಗಿದೆ.

ಸುಮಾರು 8 ಅಡಿ ಉದ್ದದ ಮೃತ ಡಾಲ್ಫಿನ್ ದೇಹ ಸಂಪೂರ್ಣ ಕೊಳೆತು ಹೋಗಿದ್ದು ಮೃತಪಟ್ಟ ಹಲವು ದಿನಗಳು ಕಳೆದಿರಬಹುದು ಎನ್ನಲಾಗುತ್ತಿದೆ.

ಕೆಲವು ದಿನಗಳ ಹಿಂದೆ ಸಮುದ್ರದಲ್ಲಿ ಕಂಡು ಬಂದ ಪ್ರಕ್ಷುಬ್ದ ವಾತಾವರಣ ಬಿರುಗಾಳಿ ಅಲೆಗಳ ಅಬ್ಬರದಿಂದಲೋ ಅಥವಾ ಅನಾರೋಗ್ಯದಿಂದ ಡಾಲ್ಪಿನ್ ಮೃತಪಟ್ಟ ಸಾಧ್ಯತೆಯಿದ್ದು ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಡಾಲ್ಫಿನ್ ಕಳೆಬರ ಬೆಳಂಬಾರ ಕಡಲ ತೀರದತ್ತ ತೇಲಿ ಬಂದು ಬಂಡೆಗಳ ಮೇಲೆ ಬಿದ್ದಿದೆ.

ಇದನ್ನೂ ಓದಿ:

ಅರಣ್ಯ ಇಲಾಖೆಯ ಸಾಗರ ಜೀವಿ ವಿಭಾಗದ ಸಿಬ್ಬಂದಿಗಳು  ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !