October 17, 2026
Saturday, October 17, 2026
spot_img

HEALTH | ಯಾವಾಗಲೂ ಮೂಗಿನೊಳಗೆ ಕೈ ಹಾಕಿಕೊಳ್ಳೋರು ಇದನ್ನು ಓದಲೇಬೇಕು!

ಮಕ್ಕಳಿಂತ ದೊಡ್ಡವರೆವರೆಗೂ ಸ್ವಲ್ಪ ಫ್ರೀಯಾದ ಸಮಯ ಸಿಕ್ಕ ತಕ್ಷಣ ಕೈ ಮೂಗಿನೊಳಗೆ ಹೋಗುತ್ತದೆ. ಸುತ್ತ ಮುತ್ತ ಜನರಿಲ್ಲದ ಸಮಯದಲ್ಲಿ ಈ ರೀತಿ ಮಾಡೋ ಎಷ್ಟೋ ಜನರಿದ್ದಾರೆ. ಆದರೆ ಇದು ಕೆಟ್ಟ ಅಭ್ಯಾಸ. ನಮ್ಮ ದೇಹವನ್ನು ನಾವೇ ಡ್ಯಾಮೇಜ್‌ ಮಾಡಿಕೊಳ್ಳುವ ವಿಧಾನವಾಗಿದೆ. ಹೀಗಾಗಿ ಇನ್ಮೇಲೆ ಮೂಗಿಗೆ ಕೈ ಹಾಕಬೇಡಿ. ಯಾಕೆ ಗೊತ್ತಾ?

ಮೂಗಿನೊಳಗೆ ಸಣ್ಣ ಕಟ್‌ಗಳಾಗುತ್ತವೆ. ಇದರಿಂದ ಇನ್ಫೆಕ್ಷನ್‌ ಆಗುತ್ತದೆ. ಸೈನಸ್‌ ಕ್ಯಾವಿಟಿ ಒಳಕ್ಕೆ ನೀವೇ ಕೈ ಹಾಕಿ ಬ್ಯಾಕ್ಟೀರಿಯಾ ಕೊಟ್ಟಂತಾಗುತ್ತದೆ.

ಇದೇ ಅಭ್ಯಾಸವಾದರೆ ಮೂಗಿನೊಳಗಿನ ಬ್ಲಡ್‌ ವೆಸಲ್‌ಗಳು ಕಿತ್ತುಹೋಗಬಹುದು. ರಕ್ತ ಬರಬಹುದು.

ನೊಸ್ಟ್ರಿಲ್ಸ್‌ಗಳನ್ನು ವಿಂಗಡಿಸುವ ಟಿಶ್ಯೂ ಹಾಳಾಗಿ, ಮೂಗಿನಲ್ಲಿ ತೂತಾಗಬಹುದು.

ಸುಲಭವಾಗಿ ಬ್ಯಾಕ್ಟೀರಿಯಾ ಮೆದುಳನ್ನು ತಲುಪುತ್ತದೆ. ಮುಂದೆ ಮರೆವಿನ ಕಾಯಿಲೆ ಬರೋದಕ್ಕೆ ಇದು ಮೊದಲ ಹೆಜ್ಜೆಯಾಗಿದೆ.

Must Read