ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲದಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದರ್ಶನ ವ್ಯವಸ್ಥೆಯನ್ನು ಸುಗಮಗೊಳಿಸಲು ಟಿಟಿಡಿ ಮಹತ್ವದ ಹೆಜ್ಜೆ ಇಟ್ಟಿದೆ. ವಿಶೇಷವಾಗಿ ಪಾದರಕ್ಷೆ ಇಡುವ ವಿಚಾರದಲ್ಲಿ ಉಂಟಾಗುತ್ತಿದ್ದ ಗೊಂದಲಕ್ಕೆ ಇದೀಗ ಡಿಜಿಟಲ್ ಪರಿಹಾರ ಒದಗಿಸಲಾಗಿದೆ.
ಹಿಂದೆ ಅನೇಕರು ಪಾದರಕ್ಷೆಗಳನ್ನು ರಸ್ತೆ ಬದಿಯಲ್ಲಿ ಅಥವಾ ಅನಿಯೋಜಿತ ಸ್ಥಳಗಳಲ್ಲಿ ಬಿಡುತ್ತಿದ್ದರಿಂದ ಅವು ಕಾಣೆಯಾಗುವ ಘಟನೆಗಳು ಸಂಭವಿಸುತ್ತಿದ್ದವು. ವಿಶೇಷ ಕೌಂಟರ್‌ಗಳಿದ್ದರೂ ಜನಸಂದಣಿ ಹೆಚ್ಚಿರುವುದರಿಂದ ಠೇವಣಿ ಹಾಗೂ ವಾಪಸು ಪಡೆಯಲು ವಿಳಂಬವಾಗುತ್ತಿತ್ತು.
ಇದನ್ನೂ ಓದಿ:
ಈ ಹಿನ್ನೆಲೆಯಲ್ಲಿ ಟಿಟಿಡಿ ಕ್ಯೂಆರ್ ಕೋಡ್ ರಸೀದಿ ವ್ಯವಸ್ಥೆಯನ್ನು ಪರಿಚಯಿಸಿದೆ. ಭಕ್ತರು ಪಾದರಕ್ಷೆಗಳನ್ನು ಕೌಂಟರ್‌ನಲ್ಲಿ ನೀಡಿದ ಬಳಿಕ ಕ್ಯೂಆರ್ ರಸೀದಿ ಪಡೆಯುತ್ತಾರೆ. ಮರಳಿ ಪಡೆಯುವಾಗ ಅದನ್ನು ಸ್ಕ್ಯಾನ್ ಮಾಡಿದರೆ ಪಾದರಕ್ಷೆಗಳು ತ್ವರಿತವಾಗಿ ಲಭ್ಯವಾಗುತ್ತವೆ. ಇದರಿಂದ ಸಮಯ ಉಳಿತಾಯವಾಗುವುದರ ಜೊತೆಗೆ ವ್ಯವಸ್ಥಿತ ನಿರ್ವಹಣೆ ಸಾಧ್ಯವಾಗಿದೆ.
ಈ ಯೋಜನೆ ಈಗಾಗಲೇ ಲಕ್ಷಾಂತರ ಭಕ್ತರಿಗೆ ಪ್ರಯೋಜನಕಾರಿಯಾಗಿದ್ದು, ಪಾದರಕ್ಷೆ ಕಳವು ಪ್ರಕರಣಗಳೂ ಕಡಿಮೆಯಾಗಿದೆ. ಹೆಚ್ಚಿನ ಭಕ್ತರ ಸಂಚಾರ ಇರುವ ಪ್ರದೇಶಗಳಲ್ಲಿ ಇನ್ನಷ್ಟು ಸ್ಮಾರ್ಟ್ ಕೌಂಟರ್‌ಗಳನ್ನು ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ. ತಂತ್ರಜ್ಞಾನ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಟಿಟಿಡಿ ಪ್ರಚಾರ ಕಾರ್ಯಕ್ಕೂ ಮುಂದಾಗಿದೆ.



