February 19, 2026
Thursday, February 19, 2026
spot_img

ಟ್ರೆಂಡ್ ಆಗ್ತಿದೆ ಕಡಲ್ ಥೆರಪಿ: ಹೀಗಂದ್ರೇನು? ಇದ್ರಿಂದ ಏನು ಲಾಭ ಇದೆ?

ವೇಗವಾದ ಜೀವನಶೈಲಿ, ಒತ್ತಡಭರಿತ ಕೆಲಸದ ವಾತಾವರಣ ಮತ್ತು ಏಕಾಂತ ಭಾವನೆಗಳ ನಡುವೆ ‘ಕಡ್ಡ್ಲಿಂಗ್ ಥೆರಪಿ’ ಎಂಬ ಹೊಸ ಪ್ರವೃತ್ತಿ ಗಮನಸೆಳೆಯುತ್ತಿದೆ. ಸರಳವಾಗಿ ಹೇಳುವುದಾದರೆ, ಪರಸ್ಪರ ಒಪ್ಪಿಗೆಯೊಂದಿಗೆ ಅಪ್ಪಿಕೊಳ್ಳುವ ಮೂಲಕ ಮಾನಸಿಕ ಆರಾಮ ಪಡೆಯುವ ವಿಧಾನವೇ ಕಡ್ಡ್ಲಿಂಗ್ ಥೆರಪಿ.

ಮಾನವ ಸ್ಪರ್ಶಕ್ಕೆ ವಿಶೇಷ ಮಹತ್ವವಿದೆ. ವಿಜ್ಞಾನಿಗಳ ಪ್ರಕಾರ, ನಂಬಿಕೆಯ ವ್ಯಕ್ತಿಯ ಅಪ್ಪುಗೆಯಿಂದ ದೇಹದಲ್ಲಿ ‘ಆಕ್ಸಿಟೋಸಿನ್’ ಎಂಬ ಹಾರ್ಮೋನ್ ಹೆಚ್ಚಾಗಿ ಬಿಡುಗಡೆ ಆಗುತ್ತದೆ. ಇದನ್ನು ‘ಹ್ಯಾಪಿ ಹಾರ್ಮೋನ್’ ಎಂದೂ ಕರೆಯಲಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ಮನಸ್ಸಿಗೆ ಶಾಂತಿ ನೀಡುತ್ತದೆ ಹಾಗೂ ಆತಂಕವನ್ನು ತಗ್ಗಿಸಲು ಸಹಕಾರಿ.

ಕಡ್ಡ್ಲಿಂಗ್ ಥೆರಪಿ ನಿದ್ರಾ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ಏಕಾಂತ ಅಥವಾ ದುಃಖದಿಂದ ಬಳಲುತ್ತಿರುವವರಿಗೆ ಭದ್ರತೆಯ ಭಾವನೆ ಮೂಡಿಸುತ್ತದೆ. ಸಂಬಂಧಗಳಲ್ಲಿ ನಂಬಿಕೆ ಹಾಗೂ ಆತ್ಮೀಯತೆಯನ್ನು ಹೆಚ್ಚಿಸಲು ಕೂಡ ಇದು ಸಹಾಯಕವಾಗಬಹುದು.

ಇದನ್ನೂ ಓದಿ:

ಆದರೆ ಈ ವಿಧಾನದಲ್ಲಿ ಸ್ಪಷ್ಟ ಒಪ್ಪಿಗೆ, ಗೌರವ ಮತ್ತು ವೈಯಕ್ತಿಕ ಗಡಿ ಅತ್ಯಂತ ಮುಖ್ಯ. ಇದು ಯಾವುದೇ ರೀತಿಯ ರೋಮ್ಯಾಂಟಿಕ್ ಅಥವಾ ಅಸಭ್ಯ ವರ್ತನೆಗೆ ಸಂಬಂಧಪಟ್ಟದ್ದಲ್ಲ. ಮನಶ್ಶಾಂತಿ ಮತ್ತು ಮಾನವೀಯ ಸಂಪರ್ಕದ ಮೂಲಕ ಸಮತೋಲನ ಸಾಧಿಸುವುದು ಇದರ ಉದ್ದೇಶ.

ಅಂದಹಾಗೆ ಬೆಂಗಳೂರಿನಲ್ಲಿ ಕಡಲ್ ಥೆರಪಿ ಅನ್ನೋ ಒಂದು ಚಿಕಿತ್ಸೆ ಕೊಡ್ತಿದ್ದಾರಂತೆ. 3-4 ಗಂಟೆಗಳ ಅವಧಿಗೆ ಸುಮಾರು 5,000 ರೂಪಾಯಿಗಳವರೆಗೆ ರೇಟ್ ಇದ್ಯಂತೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !