February 19, 2026
Thursday, February 19, 2026
spot_img

AI ನಿಂದ ಕೆಲಸ ಹೋಗೋದಿಲ್ಲ, ಎಲ್ಲರೂ ಟೆಕ್ನಾಲಜಿ ಕಲಿಬೇಕು: ಸುಂದರ್‌ ಪಿಚ್ಚೈ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

AI ನಮ್ಮ ಜೀವನಕ್ಕೆ ಕಾಲಿಟ್ಟರೆ ಜನರ ಕೆಲಸ ಹೋಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಎಐ ನಿಮ್ಮ ಕೆಲಸವನ್ನು ಕದಿಯೋದಿಲ್ಲ ಎಂದು ಗೂಗಲ್‌ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ಕೃತಕ ಬುದ್ಧಿಮತ್ತೆ ಉದ್ಯೋಗ ಕ್ಷೇತ್ರವನ್ನು ಮರು ರೂಪಿಸುವುದು, ಕೆಲವು ಕೆಲಸಗಳನ್ನು ಸ್ವಯಂಚಾಲಿತಗೊಳಿಸಿ, ಕೆಲವು ಕೆಲಸಗಳ ಸ್ವರೂಪವನ್ನು ಬದಲಿಸಿ, ಸಂಪೂರ್ಣ ಹೊಸ ವೃತ್ತಿಗಳನ್ನು ಸೃಷ್ಟಿಸುತ್ತದೆ ಎಂದಿದ್ದಾರೆ.

ಇಂದು ದೆಹಲಿ‌ನಲ್ಲಿ ನಡೆದ ಇಂಡಿಯಾ AI ಇಂಪ್ಯಾಕ್ಟ್ ಸಮಿಟ್ 2026ರ ನಾಲ್ಕನೇ ದಿನ ಮಾತನಾಡಿದ ಪಿಚೈ, ಇಪ್ಪತ್ತು ವರ್ಷಗಳ ಹಿಂದೆ ವೃತ್ತಿಪರ ಯೂಟ್ಯೂಬ್ ಕ್ರಿಯೇಟರ್ ಎಂಬ ಕಲ್ಪನೆ ಇರಲಿಲ್ಲ. ಆದರೆ ಇಂದು ವಿಶ್ವದಾದ್ಯಂತ ಲಕ್ಷಾಂತರ ಮಂದಿ ಈ ವೃತ್ತಿಯಲ್ಲಿ ತೊಡಗಿದ್ದಾರೆ. ಇದರಿಂದ ತರಬೇತಿ ಅತ್ಯಂತ ಪ್ರಮುಖವಾಗುತ್ತದೆ ಎಂದು ಅವರು ಹೇಳಿದರು.

ನಾವು 10 ಕೋಟಿ ಜನರಿಗೆ ಡಿಜಿಟಲ್ ಕೌಶಲ್ಯಗಳಲ್ಲಿ ತರಬೇತಿ ನೀಡಿದ್ದೇವೆ. ನಮ್ಮ ಹೊಸ ಗೂಗಲ್ AI ಪ್ರೊಫೆಷನಲ್ ಪ್ರಮಾಣಪತ್ರವು ಜನರಿಗೆ ತಮ್ಮ ಉದ್ಯೋಗಗಳಲ್ಲಿ AI ನ್ನು ಅರ್ಥಮಾಡಿಕೊಳ್ಳಲು ಮತ್ತು ಬಳಸಲು ಸಹಾಯ ಮಾಡುತ್ತದೆ. ಇದು ಜಾಗತಿಕವಾಗಿ ಲಭ್ಯವಾಗುತ್ತದೆ  ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !