February 20, 2026
Friday, February 20, 2026
spot_img

ರಾಜ್ಯದಲ್ಲಿ ವಾಯು ಮಾಲಿನ್ಯ ಏರಿಕೆ: ಮಂಗಳೂರಲ್ಲೂ ಕಳಪೆ ಏರ್ ಕ್ವಾಲಿಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಹಲವು ನಗರಗಳಲ್ಲಿ ವಾಯು ಗುಣಮಟ್ಟ ಮತ್ತೆ ಹದಗೆಟ್ಟಿದೆ. ವಿಶೇಷವಾಗಿ ಬೆಂಗಳೂರು, ಮಂಗಳೂರು ಹಾಗೂ ಉಡುಪಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) ಆತಂಕಕಾರಿಯಾಗಿ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದು ಸ್ಥಳೀಯರಲ್ಲಿ ಚಿಂತೆ ಮೂಡಿಸಿದೆ.

ಇಂದು ಬೆಂಗಳೂರಿನ AQI 135 ದಾಖಲಾಗಿದ್ದು, ಇದು ‘ಕಳಪೆ’ ಮಟ್ಟದಲ್ಲಿದೆ. ಮಂಗಳೂರು ನಗರದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದ್ದು, AQI 194ಕ್ಕೆ ಏರಿದೆ. ಕಳೆದ ಕೆಲ ದಿನಗಳಿಂದ ನಿರಂತರ ಏರಿಕೆ ಕಂಡುಬರುತ್ತಿರುವ ಮಂಗಳೂರಿನ ಗಾಳಿಯ ಗುಣಮಟ್ಟ 200ರ ಗಡಿಗೆ ಸಮೀಪಿಸಿರುವುದು ಆರೋಗ್ಯದ ದೃಷ್ಟಿಯಿಂದ ಆತಂಕಕಾರಿ. ಬಳ್ಳಾರಿಯಲ್ಲಿ AQI 152 ದಾಖಲಾಗಿದೆ.

ಇದನ್ನೂ ಓದಿ:

ವಾಯು ಗುಣಮಟ್ಟ ಸೂಚ್ಯಂಕದಲ್ಲಿ 0-50 ಉತ್ತಮ, 50-100 ಮಧ್ಯಮ, 100-150 ಕಳಪೆ, 150-200 ಅನಾರೋಗ್ಯಕರ, 200-300 ಗಂಭೀರ ಹಾಗೂ 300ಕ್ಕಿಂತ ಮೇಲ್ಪಟ್ಟರೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. WHO ಮಾನದಂಡಗಳ ಪ್ರಕಾರ ಇಂದಿನ ಮಟ್ಟಗಳು ಆರೋಗ್ಯಕ್ಕೆ ಹಾನಿಕರವಾಗಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !