ಸ್ಟೀಲ್ ಅಥವಾ ಅಲ್ಯುಮಿನಿಯಮ್ ಪಾತ್ರೆಗಳಲ್ಲಿ ಕೆಲವೊಂದು ಅಡುಗೆ ಸಾಧ್ಯವಾಗೋದಿಲ್ಲ. ಗ್ರೇವಿ, ರೈಸ್ ಐಟಮ್ಸ್ ಯಾವ ಪಾತ್ರೆಗಳಲ್ಲಾದ್ರೂ ಮಾಡಬಹುದು. ಆದರೆ ನಾನ್ ವೆಜ್ ಡ್ರೈ ಅಥವಾ ಡ್ರೈ ಪಲ್ಯಗಳು, ಸಿಹಿ ಪದಾರ್ಥಗಳನ್ನು ತಯಾರಿಸೋಕೆ ನಾನ್ ಸ್ಟಿಕ್ ಪಾತ್ರೆಯೇ ಬೇಕು. ತಳ ಅಂಟದೆ ಅಡುಗೆ ರುಚಿ ಹಾಗೇ ಇರುತ್ತದೆ. ಆದರೆ ನಾನ್‌ಸ್ಟಿಕ್ ಬಳಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು..
ನಾನ್ ಸ್ಟಿಕ್ ಪಾತ್ರೆಗೆ ಸ್ಟೀಲ್ ಕೈ ಬಳಕೆ ಮಾಡುವಂತಿಲ್ಲ. ಮರದ ಕೈಗಳನ್ನು ಮಾತ್ರ ಬಳಕೆ ಮಾಡಿ. ನಿಧಾನಕ್ಕೆ ಸಾಟೆ ಮಾಡಿ. ಸ್ಕ್ರಾಚ್ ಆಗಂದತೆ ನೋಡಿಕೊಳ್ಳಿ.
ಅತಿಯಾದ ಹೀಟ್‌ನಲ್ಲಿ ಇದನ್ನು ಬಳಸುವಂತಿಲ್ಲ. ಮೀಡಿಯಂ ಅಥವಾ ಸಣ್ಣ ಉರಿಯಲ್ಲಿ ಅಡುಗೆ ಮಾಡಿ.
ನಾನ್‌ಸ್ಟಿಕ್ ಪಾತ್ರೆಗಳಲ್ಲಿ ಮಿಕ್ಕಿರುವ ಆಹಾರ ಸ್ಟೋರ್ ಮಾಡುವಂತಿಲ್ಲ. ಅಡುಗೆ ಆದ ನಂತರ ಪದಾರ್ಥವನ್ನು ಬೇರೆ ಪಾತ್ರೆಗೆ ವರ್ಗಾಯಿಸಿ
ಪಾತ್ರೆಗಳನ್ನು ತೊಳೆಯುವಾಗಲೂ ಜಾಗ್ರತೆ ಇರಲಿ. ಸ್ಟೀಲ್ ಗುಂಜಿನಿಂದ ತೊಳೆಯುವಂತಿಲ್ಲ.



