April 15, 2026
Wednesday, April 15, 2026
spot_img

Viral | ಜಪಾನ್ Zooನಲ್ಲಿ ಲೋನ್ಲಿ ಮಂಕಿ ಪಂಚ್ ಕಥೆ ಕೇಳಿ: ಅಮ್ಮ ಬೇಡ ಅಂದ ಮರಿಗೆ ಆಟಿಕೆಯೇ ತಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್‌ನ ಇಚಿಕಾವಾ ಸಿಟಿಯ Zooನಲ್ಲಿ ಜನಿಸಿದ ಸಣ್ಣ ಜಪಾನೀಸ್ ಮಕಾಕ್ ಕಪಿ “ಪಂಚ್” ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಕಥೆಯಾಗಿ ವೈರಲ್ ಆಗಿದೆ. ಮರಿ ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿ ತೊರೆದುಹೋದ ಕಾರಣ, ಕೇವಲ 500 ಗ್ರಾಂ ತೂಕದ ಈ ಕಪಿ ಮೃಗಾಲಯದ ಸಿಬ್ಬಂದಿ ಆರೈಕೆಯಲ್ಲಿ ಬೆಳೆದಿತ್ತು.

ತಾಯಿಯ ಮಮತೆಯ ಕೊರತೆಯಿಂದ ಉಂಟಾದ ಒತ್ತಡವನ್ನು ಕಡಿಮೆ ಮಾಡಲು ಮೃಗಾಲಯದ ಸಿಬ್ಬಂದಿ ಮೃದುವಾದ ಆಟಿಕೆಗಳನ್ನು ನೀಡಿದರು. ಅವುಗಳಲ್ಲಿ ಒರಂಗುಟಾನ್ ಆಕಾರದ ಪ್ಲಷ್ ಆಟಿಕೆಗೆ ಪಂಚ್ ಗೆ ಅಮ್ಮನ ಅನುಭವ ನೀಡಿತ್ತು. ರಾತ್ರಿಯಲ್ಲೂ ಅದನ್ನೇ ಹಿಡಿದು ಮಲಗುತ್ತಿದ್ದ ದೃಶ್ಯಗಳು ಆನ್‌ಲೈನ್‌ನಲ್ಲಿ ಹರಿದಾಡಿದ್ದವು.

ಇದನ್ನೂ ಓದಿ:

ಇತ್ತೀಚೆಗೆ ಏಳು ತಿಂಗಳಾದ ಪಂಚ್ ನ್ನು ಮತ್ತೆ ಕಪಿಗಳ ಗುಂಪಿಗೆ ಪರಿಚಯಿಸಲಾಯಿತು. ಆರಂಭದಲ್ಲಿ ಸ್ವಲ್ಪ ಆತಂಕ ಕಂಡರೂ, ಈಗ ಅದು ಇತರ ಕಪಿಗಳೊಂದಿಗೆ ಬೆರೆತಿದೆ ಎಂದು ಹೇಳಲಾಗುತ್ತಿದೆ.

ಒಮ್ಮೆ “ಲೋನ್ಲಿ ಮಂಕಿ” ಎಂದೇ ಕರೆಯಲ್ಪಟ್ಟ ಪಂಚ್, ಈಗ ತನ್ನ ಹೊಸ ಕುಟುಂಬದಲ್ಲಿ ಸ್ಥಳ ಪಡೆಯುತ್ತಿರುವುದು ಪ್ರೇಕ್ಷಕರಿಗೆ ಮತ್ತೊಮ್ಮೆ ಖುಷಿ ತಂದಿದೆ.

https://twitter.com/visegrad24/status/2024098524401369530?ref_src=twsrc%5Etfw%7Ctwcamp%5Etweetembed%7Ctwterm%5E2024098524401369530%7Ctwgr%5E59d6387e4ad0739815578faf1658e9f8ca19c7d5%7Ctwcon%5Es1_c10&ref_url=https%3A%2F%2Fpublish.twitter.com%2F%3Furl%3Dhttps%3A%2F%2Ftwitter.com%2Fvisegrad24%2Fstatus%2F2024098524401369530

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !