June 24, 2026
Wednesday, June 24, 2026
spot_img

CINE | ದಾಖಲೆಯ ವ್ಯೂಸ್‌ ಪಡೆದ ಟಾಕ್ಸಿಕ್‌ ಟೀಸರ್‌, ರಕ್ತಸಿಕ್ತ ಅಧ್ಯಾಯಕ್ಕೆ ಭಾರೀ ಮೆಚ್ಚುಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಕ್ಕಾಪಟ್ಟೆ ಹೈಪ್‌ ಪಡೆದಿರುವ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಟೀಸರ್‌ ನಿನ್ನೆಯಷ್ಟೇ ರಿಲೀಸ್‌ ಆಗಿದೆ.

ಪ್ಯಾನ್‌ ಇಂಡಿಯಾ ಸಿನಿಮಾ ಟಾಕ್ಸಿಕ್‌ನಲ್ಲಿ ಎಲ್ಲ ಇಂಡಸ್ಟ್ರಿಯ ಕಲಾವಿದರು ಇದ್ದಾರೆ. ನಿನ್ನೆ ಕನ್ನಡ, ಹಿಂದಿ, ತೆಲುಗು,ತಮಿಳು ಹಾಗೂ ಮಲಯಾಳಂನಲ್ಲಿ ಸಿನಿಮಾ ಟೀಸರ್‌ ರಿಲೀಸ್‌ ಆಗಿದೆ.

ಕೇವಲ ಒಂದು ದಿನದಲ್ಲಿ ಟಾಕ್ಸಿಕ್‌ ಟೀಸರ್‌ ಐದು ಕೋಟಿ ವ್ಯೂಸ್‌ ಗಳಿಸಿಕೊಂಡಿದೆ. 1:55 ನಿಮಿಷದ ಟೀಸರ್ ಅನ್ನು ನಿನ್ನೆ ‘ಟಾಕ್ಸಿಕ್’ ಚಿತ್ರತಂಡ ಬಿಡುಗಡೆ ಮಾಡಿತ್ತು. ಟೀಸರ್, ಸಿನಿಮಾದ ನಿರ್ಮಾಣ ಸಂಸ್ಥೆಯಾದ ಕೆವಿಎನ್​ ಪ್ರೊಡಕ್ಷನ್ಸ್​​ನ ಯೂಟ್ಯೂಬ್ ಚಾನೆಲ್​​ನಲ್ಲಿ ಬಿಡುಗಡೆ ಆಯ್ತು. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಟೀಸರ್​​ಗೆ ಭರಪೂರ ಮೆಚ್ಚುಗೆಗಳು ವ್ಯಕ್ತವಾಗಿವೆ. ಟೀಸರ್ ಬಿಡುಗಡೆ ಆದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !