February 22, 2026
Sunday, February 22, 2026
spot_img

CINE | ಅಂಜನಾದ್ರಿಯಲ್ಲಿ ರಿಷಬ್ ದಂಪತಿ: ಜೈ ಹನುಮಾನ್ ಚಿತ್ರಕ್ಕೆ ಶುಭಾರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹನುಮ ಜನ್ಮಸ್ಥಳವೆಂದು ಪೂಜಿಸಲ್ಪಡುವ ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ್’ ಚಿತ್ರದ ಮುಹೂರ್ತ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನೆರವೇರಿತು. ಬೆಳಿಗ್ಗೆ 11:50ಕ್ಕೆ ವಿಶೇಷ ಪೂಜೆಯೊಂದಿಗೆ ತೆಲುಗು ಚಿತ್ರದ ಶೂಟಿಂಗ್‌ಗೆ ಚಾಲನೆ ನೀಡಲಾಯಿತು.

ಚಿತ್ರದಲ್ಲಿ ಆಂಜನೇಯನ ಪಾತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ಬೆಟ್ಟಕ್ಕೆ ಭೇಟಿ ನೀಡಿ ಹನುಮ ದೇವರಿಗೆ ವಿಶೇಷ ಅರ್ಚನೆ ಸಲ್ಲಿಸಿದರು. ದೇವಾಲಯದಲ್ಲಿ ಸರಳ ವಿಧಿವಿಧಾನಗಳ ಮಧ್ಯೆ ಚಿತ್ರತಂಡ ಚಿತ್ರದ ಶುಭಾರಂಭ ಮಾಡಿಕೊಂಡಿತು.

ಇದನ್ನೂ ಓದಿ:

ಈ ಸಿನಿಮಾವನ್ನು ತೆಲುಗು ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿದ್ದಾರೆ. ಪೌರಾಣಿಕ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಭಕ್ತಿ ಮತ್ತು ಭವ್ಯತೆಯ ಮೇಳೈಸುವ ಪ್ರಯತ್ನ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.

ಹನುಮ ಜನ್ಮಸ್ಥಳದಲ್ಲೇ ಮುಹೂರ್ತ ನಡೆಸಿರುವುದು ಚಿತ್ರಕ್ಕೆ ವಿಶೇಷ ಅರ್ಥ ನೀಡಿದೆ. ಭಕ್ತರ ಸಮ್ಮುಖದಲ್ಲಿ ಆರಂಭವಾದ ‘ಜೈ ಹನುಮಾನ್’ ಈಗಿನಿಂದಲೇ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !