ಮೇಷ
ನಿದ್ದೆ ಮತ್ತು ಆಹಾರ ಸೇವನೆ ಸರಿಯಾಗಿರಲಿ. ನಿಮ್ಮನ್ನು ಕಾಡುತ್ತಿರುವ ಒತ್ತಡ ನಿವಾರಣೆಗೆ ಇದು ಅಗತ್ಯ. ನೆಮ್ಮದಿ ದೂರ. ಧನವ್ಯಯ ಹೆಚ್ಚು.
ವೃಷಭ
ಕ್ಲಿಷ್ಟ ಬಿಕ್ಕಟ್ಟು, ಅದರ ನಿಭಾವಣೆ ಕಷ್ಟ ಎನಿಸಬಹುದು. ಸಂಜೆ ವೇಳೆಗೆ ಎಲ್ಲವೂ ಸುರಳೀತ ಆಗುವ ಸಂಕೇತ ತೋರಲಿದೆ. ನಿರಾಳತೆ.
ಮಿಥುನ
ಅಧಿಕ ಹೊಣೆ. ಆದರೆ ಸೂಕ್ತ ಸಹಕಾರ ಅಲಭ್ಯ. ಮಕ್ಕಳ ಏಳಿಗೆಯ ಚಿಂತೆ ಕಾಡಬಹುದು. ಹಿರಿಯರಿಗೆ ಆರೋಗ್ಯ ಸಮಸ್ಯೆ ಸಂಭವ.
ಕಟಕ
ಗುರಿಯಿಂದ ವಿಚಲಿತಗೊಳಿಸುವ ಕೆಲವು ವಿಚಾರಗಳು ಕಾಡಬಹುದು. ಅತ್ತ ಗಮನ ಹರಿಸದಿರಿ. ಕೆಲವು ಚಿಂತೆ ಅಕಾರಣ.
ಸಿಂಹ
ಸಮಸ್ಯೆ ತಾನಾಗಿ ಪರಿಹಾರ ಕಾಣಲು ಸಮಯ ಕೊಡಿ. ನಿಮ್ಮ ಪ್ರಯತ್ನ ಈಗಲೇ ಫಲ ನೀಡದು. ಹಣದ ವ್ಯವಹಾರ ನಿರಾಳ.
ಕನ್ಯಾ
ಖಾಸಗಿ ಬದುಕಲ್ಲಿ ನಿರೀಕ್ಷಿತ ಫಲ ಇಂದು ದೊರಕದು. ನಿರಾಶೆ. ಆರೋಗ್ಯದ ಬಗ್ಗೆ ಚಿಂತೆ ಇದ್ದರೆ ನಿರಾಳತೆ ಸಿಗಲಿದೆ. ಧನವ್ಯಯ ಹೆಚ್ಚು.
ತುಲಾ
ಹಲವಾರು ಹೊಣೆ ಒಮ್ಮೆಗೆ ಹೊತ್ತುಕೊಂಡು ಕಷ್ಟಪಡುವಿರಿ. ಕೆಲವರ ಜತೆ ಮುಸುಕಿನ ಗುದ್ದಾಟ. ತಾಳ್ಮೆಯಿಂದ ವರ್ತಿಸಿ, ಕಟು ಮಾತು ಆಡದಿರಿ.
ವೃಶ್ಚಿಕ
ಏಕಕಾಲದಲ್ಲಿ ಬಹಳ ಕೆಲಸ ಆಗಬೇಕೆಂದು ಬಯಸುವಿರಿ. ಅದರಿಂದ ಒತ್ತಡ ಹೆಚ್ಚು. ಅಹಿತ ಆಹಾರ ಸೇವನೆಯಿಂದ ಹೊಟ್ಟೆ ಕೆಡಬಹುದು.
ಧನು
ಬಾಕಿ ಇರುವ ಕೆಲಸ ಮೊದಲು ಮುಗಿಸಿ. ಅದುವೇ ನಿಮ್ಮ ಚಿಂತೆಗೆ ಕಾರಣವಾಗುತ್ತಿರುವುದು. ಅಜೀರ್ಣ ಸಮಸ್ಯೆಯಿಂದ ಮುಕ್ತಿ, ಆರೋಗ್ಯ ಸ್ಥಿರ.
ಮಕರ
ನಿಮ್ಮ ಮೃದು ಧೋರಣೆ ನಿಮ್ಮನ್ನು ಸಮಸ್ಯೆಗೆ ನೂಕಬಹುದು. ಕೆಲವೇಳೆ ಕಠಿಣವಾಗಿ ವರ್ತಿಸಬೇಕು. ದಂಪತಿ ಮಧ್ಯೆ ಭಿನ್ನಾಭಿಪ್ರಾಯ.
ಕುಂಭ
ಕಾಡುವ ಸಮಸ್ಯೆಗೆ ಪರಿಹಾರ ಹುಡುಕಿ. ಅದರಷ್ಟಕ್ಕೆ ಬಿಡಬೇಡಿ. ಆಪ್ತೇಷ್ಟರ ಕಾಳಜಿ ಇಂದು ಮುಖ್ಯವಾಗಲಿದೆ. ದೈಹಿಕ ನೋವು ಶಮನವಾಗಲಿದೆ.
ಮೀನ
ವೃತ್ತಿಯಲ್ಲಿ ಯಶಸ್ಸು. ಸಂಗಾತಿ ಜತೆ ಭಿನ್ನಮತ ಇದ್ದರೆ ಅದರ ಪರಿಹಾರಕ್ಕೆ ಆದ್ಯತೆ ಕೊಡಿ. ಅಲರ್ಜಿ ಸಂಬಂಧಿತ ಅನಾರೋಗ್ಯ ಬಾಧಿಸಬಹುದು.



