June 24, 2026
Wednesday, June 24, 2026
spot_img

CINE | ‘ಟಾಕ್ಸಿಕ್’ ವಿರುದ್ಧ ಟ್ವೀಟ್ ಸಮರ ಸಾರಿದ ಆರ್‌ಜಿವಿ: ಸುಮ್ನೆ ಬಿಡ್ತಾರಾ ಫ್ಯಾನ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇತ್ತೀಚಿನ ಹೇಳಿಕೆಯಿಂದ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸರಾಗಿದ್ದಾರೆ. ಮಾರ್ಚ್ 19ರಂದು ಒಂದೇ ದಿನ ಬಿಡುಗಡೆಯಾಗುತ್ತಿರುವ ‘ಟಾಕ್ಸಿಕ್’ ಹಾಗೂ ‘ಧುರಂದರ್ 2’ ಸಿನಿಮಾಗಳ ಕುರಿತು ಅವರು ನೀಡಿದ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿದೆ.

ಎರಡು ಚಿತ್ರಗಳು ಮುಖಾಮುಖಿಯಾಗುತ್ತಿರುವ ಹಿನ್ನೆಲೆಯಲ್ಲಿ ಒಂದಕ್ಕೆ ಹಿನ್ನಡೆಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದಾಗ, ಆರ್‌ಜಿವಿ ‘ಧುರಂದರ್ 2’ ಕಲೆಕ್ಷನ್ ಎದುರು ‘ಕೆಜಿಎಫ್ 2’ ಕೂಡ ಸಣ್ಣದಾಗಿ ಕಾಣಿಸುತ್ತದೆ ಎಂದು ಹೇಳಿಕೆ ನೀಡಿದರು. ಜೊತೆಗೆ, ಒಂದು ಸಿನಿಮಾ ಪ್ರೇಕ್ಷಕರ ಬುದ್ಧಿಮತ್ತೆಯನ್ನು ಗೌರವಿಸುತ್ತದೆ, ಇನ್ನೊಂದು ಜನರ ಮೂರ್ಖತನವನ್ನು ಗುರಿಯಾಗಿಸುತ್ತದೆ ಎಂಬ ರೀತಿಯಲ್ಲಿ ಟೀಕೆ ಮಾಡಿದರು. ಈ ಹೇಳಿಕೆ ‘ಟಾಕ್ಸಿಕ್’ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಯಿತು.

ಇದನ್ನೂ ಓದಿ:

ಆರ್‌ಜಿವಿ ಹಿಂದೆ ‘ಕೆಜಿಎಫ್ 2’ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಟ್ವೀಟ್‌ಗಳನ್ನು ನೆನಪಿಸಿ, ನೆಟಿಜನ್ಸ್ ಪ್ರಶ್ನೆ ಎತ್ತಿದರು. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಹೆಚ್ಚಾಗಿದ್ದು, ವಿವಾದ ತೀವ್ರಗೊಂಡ ಬಳಿಕ ಸ್ಪಷ್ಟನೆ ನೀಡಿದ ಅವರು, ತಾವು ನಿರ್ದಿಷ್ಟ ಚಿತ್ರವನ್ನಲ್ಲ, ಬಿಡುಗಡೆಯಾಗುವ ಸಿನಿಮಾಗಳ ಶೈಲಿಗಳ ನಡುವಿನ ವ್ಯತ್ಯಾಸವನ್ನು ಮಾತ್ರ ಉಲ್ಲೇಖಿಸಿದ್ದಾಗಿ ತಿಳಿಸಿದ್ದಾರೆ. ಅವರ ಹೇಳಿಕೆಗೂ ಇನ್ನೂ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !