September 27, 2026
Sunday, September 27, 2026
spot_img

ಮಂತ್ರಾಲಯ ಗುರುವೈಭವೋತ್ಸವದಲ್ಲಿ ನಟ ರಾಘವೇಂದ್ರ ರಾಜ್​ಕುಮಾರ್ ಗೆ ಗೌರವ ಡಾಕ್ಟರೇಟ್ ಪ್ರದಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂತ್ರಾಲಯದ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್​ಕುಮಾರ್ ಅವರಿಗೆ ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು/

ಫ್ಲೋರಿಡಾದ ಯೋಗ ಸಂಸ್ಕೃತಂ ವಿಶ್ವವಿದ್ಯಾಲಯದಿಂದ ಅವರಿಗೆ ಈ ಗೌರವ ನೀಡಲಾಗಿದೆ.

ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್ , ಡಾಕ್ಟರೇಟ್ ಪದವಿಯನ್ನು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಅರ್ಪಿಸುವೆ. ನಾನು ಹುಟ್ಟಿದಾಗ ತಂದೆ ಅವರು ಮಂತ್ರಾಲಯ ಸಿನಿಮಾ ಮಾಡುತ್ತಿದ್ದರು. ಆಗ ನನಗೆ ರಾಘವೇಂದ್ರ ಅಂತ ನನಗೆ ಹೆಸರು ಇಟ್ಟಿದ್ರು. ಅದು ರಾಘವೇಂದ್ರ ರಾಜ್​ಕುಮಾರ್ ಆಗಿ ಬೆಳೆದು ಬಂದಿದೆ’ ಎಂದು ಅವರು ಹೇಳಿದರು.

ನನಗೆ ಈಗ ಡಾಕ್ಟರೇಟ್ ಪದವಿ ಕೊಟ್ಟಿದ್ದಾರೆ.ಏನು ಸಾಧನೆ ಮಾಡದೇ ಇರುವವನಿಗೆ ಯಾಕೆ ಕೊಟ್ಟರು ಎನಿಸುತ್ತದೆ. ದೇವರ ಆಶೀರ್ವಾದದಿಂದ ಬಂದಿದೆ. ಇನ್ಮೇಲೆ ನಾನು ಸಮಾಜ ಸೇವೆ ಮಾಡಿಕೊಂಡು ಜನರ ಜೊತೆ ಬೆರೆತು ಕೆಲಸ ಮಾಡುತ್ತೇನೆ ಎಂದು ಹೇಳಿದರು.

Must Read