ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೋರ್ಟ್ ತೀರ್ಪಿನ ನೆಪದಲ್ಲಿ ನಮ್ಮೊಂದಿಗೆ ಆಟವಾಡಿದರೆ ಹೆಚ್ಚು ತೆರಿಗೆ ವಿಧಿಸಬೇಕಾಗುತ್ತದೆ ಎಂದು ವಿದೇಶಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಸುಪ್ರೀಂ ಆದೇಶದಿಂದ ನನಗೆ ಇನ್ನಷ್ಟು ಅಧಿಕಾರಗಳು ದೊರಕಿವೆ. ರಫ್ತು ಮತ್ತು ಆಮದನ್ನು ನಿಯಂತ್ರಿಸಲು ನಾನು ಪರವಾನಗಿ ಪದ್ಧತಿಯನ್ನು ಜಾರಿಗೆ ತರಬಹುದು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಕುರಿತು ತಮ್ಮ ಟ್ರುತ್ ಸೋಷಿಯಲ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ‘ಸುಪ್ರೀಂ ಕೋರ್ಟ್ಅನ್ನು ಇನ್ನು ನಾನು ಕ್ಯಾಪಿಟಲ್ ಅಕ್ಷರದಲ್ಲಿ ಬರೆಯಲ್ಲ. ಏಕೆಂದರೆ ಅದು ಮಹತ್ವ ಕಳೆದುಕೊಂಡಿದೆ. ನಾನು ವಿಧಿಸಿದ್ದ ತೆರಿಗೆಯನ್ನು ರದ್ದು ಮಾಡುವ ಮೂಲಕ ಅದು ನನಗೆ ಆಕಸ್ಮಿಕವಾಗಿ ಮತ್ತು ಅರಿವಿಲ್ಲದೆ ಪರವಾನಗಿ ಪದ್ಧತಿಯಂತಹ ಇನ್ನಷ್ಟು ಅಧಿಕಾರಗಳನ್ನು ಕೊಟ್ಟಂತಾಗಿದೆ. ಇದರಿಂದ ನಾನು ವಿದೇಶಗಳ ವಿಷಯದಲ್ಲಿ ಭಯಾನಕ ಹೆಜ್ಜೆಗಳನ್ನಿಡಬಹುದು. ಪರವಾನಗಿಗೂ ಶುಲ್ಕವನ್ನು ಪಡೆಯುತ್ತೇನೆ’ ಎಂದು ಹೇಳಿದ್ದಾರೆ.
ಜೊತೆಗೆ ಸುಪ್ರೀಂ ಕೋರ್ಟ್ಅನ್ನು ಇನ್ನು ನಾನು ಕ್ಯಾಪಿಟಲ್ ಅಕ್ಷರದಲ್ಲಿ ಬರೆಯಲ್ಲ. ಏಕೆಂದರೆ ಅದು ಮಹತ್ವ ಕಳೆದುಕೊಂಡಿದೆ ಎಂದು ಟೀಕಿಸಿದ್ದಾರೆ.



