October 2, 2026
Friday, October 2, 2026
spot_img

ಬಾಪೂಜಿ ತ್ಯಾಗದ ಇತಿಹಾಸವನ್ನು ಮರೆಯಲು ಸಾಧ್ಯವೇ ಇಲ್ಲ: ಸಿಎಂ ಡಿ.ಕೆ ಶಿವಕುಮಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮರೆವುದೆಂತಾ ನಮ್ಮ ಸ್ವಾತಂತ್ರ್ಯ ಶಿಲ್ಪಿಯಂ
ದಿವ್ಯ ದಿನದೀ ಶುಭಮುಹೂರ್ತದಲಿ?
ಮರೆವುದಂತಯ್‌ ಭುವನ ಗೌರವ ಮಹಾತ್ಮನಂ
ಸ್ವಾತಂತ್ರ್ಯದೀ ಸುಪ್ರಭಾತದಲಿ..

ರಾಷ್ಟ್ರಕವಿ ಕುವೆಂಪು ಅವರು ಮಹಾತ್ಮ ಗಾಂಧಿಯವರ ಕುರಿತು ಬರೆದಿರುವ ಸಾಲುಗಳು ಇಂದಿಗೂ ಪ್ರಸ್ತುತ.ಬಾಪೂಜಿ ತ್ಯಾಗದ ಇತಿಹಾಸವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಗಾಂಧಿ ಜಯಂತಿ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದು, ದೇಶಕ್ಕಾಗಿ ಮತ್ತು ಜನರಿಗಾಗಿ ಬಾಪೂಜಿ ಸವೆಸಿದ ತ್ಯಾಗದ ಇತಿಹಾಸವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಗಿಡವೊಂದು ಸದ್ದಿಲ್ಲದೆ ಮೊಳಕೆಯೊಡೆದು ಹೆಮ್ಮರವಾಗಿ ನೆರಳು ನೀಡುವಂತೆ, ಬಾಪೂಜಿ ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಸತ್ಯಾನ್ವೇಷಣೆಯ ಮೂಲಕ ಪ್ರಯೋಗಕ್ಕೊಳಪಡಿಸಿದ ಅವರ ಜೀವನ ಪ್ರತಿಯೊಬ್ಬರಿಗೂ ಒಂದು ಮುಕ್ತ ಪಾಠಶಾಲೆ. ಗಾಂಧೀಜಿಯವರ ಉನ್ನತ ಆದರ್ಶಗಳನ್ನು ಪಾಲಿಸೋಣ; ಸಾಮರಸ್ಯ ಮತ್ತು ಸಮಾನತೆಯ ಕನಸಿನ ಭಾರತವನ್ನು ಕಟ್ಟುವ ಹಾದಿಯಲ್ಲಿ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ.

ಗಾಂಧಿ ಜಯಂತಿಯ ಶುಭಾಶಯಗಳು ಎಂದು ನಾಡಿನ ಸಮಸ್ತ ಜನತೆಗೆ ಶುಭಕೋರಿದ್ದಾರೆ.

Must Read