February 24, 2026
Tuesday, February 24, 2026
spot_img

CINE | ಟಾಕ್ಸಿಕ್ ನಲ್ಲಿ ರಿವೀಲ್ ಆಯ್ತು ಮತ್ತೊಂದು ಪಾತ್ರ: ಯಾರಿದು ‘ಬೀರ’?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆಯಾದ ಬಳಿಕ ಹೊಸ ಪಾತ್ರಗಳ ಪರಿಚಯ ಮುಂದುವರಿದಿದೆ. ಇದೀಗ ಚಿತ್ರತಂಡ ‘ಬೀರ’ ಎನ್ನುವ ಪ್ರಮುಖ ಪಾತ್ರದ ಲುಕ್ ಬಿಡುಗಡೆ ಮಾಡಿದೆ. ಈ ಪಾತ್ರದಲ್ಲಿ ಪ್ಯಾನ್ ಇಂಡಿಯಾ ಖ್ಯಾತಿಯ ನಟ ಬಾಲಾಜಿ ಮನೋಹರ್ ಕಾಣಿಸಿಕೊಂಡಿದ್ದಾರೆ.

ಬಿಡುಗಡೆಯಾದ ಪೋಸ್ಟರ್‌ನಲ್ಲಿ ದೊಡ್ಡ ಗಾಜು ಕನ್ನಡಿಗಳು, ಬಾಯಲ್ಲಿ ಸಿಗಾರ್ ಹಿಡಿದು ಗಂಭೀರವಾಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಲುಕ್ ಗಮನ ಸೆಳೆದಿದ್ದು, ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ:

ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದು, ಅವರ ಎರಡು ರೂಪಗಳು ಈಗಾಗಲೇ ವೈರಲ್ ಆಗಿವೆ. ಜೊತೆಗೆ ನಯನತಾರ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಗೀತು ಮೋಹನದಾಸ್ ನಿರ್ದೇಶನದ ಈ ಚಿತ್ರ ಮಾರ್ಚ್ 19ರಂದು ಬಿಡುಗಡೆಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !