February 25, 2026
Wednesday, February 25, 2026
spot_img

ಮಗಳ SSLC ಪರೀಕ್ಷೆಗೆ ಸಾಥ್ ನೀಡಲು ಕೊಲೆ ಅಪರಾಧಿ ತಂದೆಗೆ ಸಿಕ್ಕಿತು ಮಧ್ಯಂತರ ಜಾಮೀನು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದೆಲ್ಲೆಡೆ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ನಡೆಯುತ್ತಿದ್ದು, ಒಡಿಶಾದಲ್ಲೂ ಪರೀಕ್ಷೆ ನಡುವೆ ಹೃದಯಸ್ಪರ್ಶಿ ಘಟನೆಯೊಂದು ಬೆಳಕಿಗೆ ಬಂದಿದೆ.

ಒಡಿಶಾ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಯೊಬ್ಬರಿಗೆ ತಾತ್ಕಾಲಿಕ ಬಿಡುಗಡೆ ನೀಡಲಾಗಿದೆ.

ತಮ್ಮ ಮಗಳ 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಸಹಾಯ ಮಾಡುವ ಉದ್ದೇಶದಿಂದ ಒಡಿಶಾ ಹೈಕೋರ್ಟ್ ಈ ತೀರ್ಪು ನೀಡಿದ್ದು, ಶಿಕ್ಷಣವು ಪ್ರತಿ ಮಗುವಿನ ಮೂಲಭೂತ ಹಕ್ಕು. ಕೆಲವು ಸಂದರ್ಭಗಳಲ್ಲಿ ಪೋಷಕರ ಉಪಸ್ಥಿತಿಯು ಅತ್ಯಗತ್ಯವಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.

ಬಾಲಕಿಯ ಮನೆಯಲ್ಲಿ ವೃದ್ಧ ಅಜ್ಜ-ಅಜ್ಜಿ ಮಾತ್ರ ಇದ್ದು, ಅವರಿಗೆ ಪ್ರತಿದಿನ ಆಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಲು ಕಷ್ಟವಾಗಿದೆ. ಹೀಗಾಗಿ ಆಕೆಯ ತಂದೆ ತಾತ್ಕಾಲಿಕ ಬಿಡುಗಡೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಹೈಕೋರ್ಟ್, ಕಾನೂನು ಕಟ್ಟುನಿಟ್ಟಾಗಿರಬೇಕು. ಆದರೆ ಮಾನವೀಯ ಪರಿಗಣನೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹೇಳಿ ಮಧ್ಯಂತರ ಜಾಮೀನು ನೀಡಿತು.ಮಾರ್ಚ್ 10 ರವರೆಗೆ ಜಾಮೀನು ಜಾರಿಯಲ್ಲಿರುತ್ತದೆ ಎಂದು ನ್ಯಾಯಾಲಯ ಆದೇಶಿಸಿತು. ನಂತರ ಅಪರಾಧಿ ಕೆಳ ನ್ಯಾಯಾಲಯದ ಮುಂದೆ ಶರಣಾಗಬೇಕು.

2010ರ ಕೊಲೆ ಪ್ರಕರಣದಲ್ಲಿ ಶ್ರೀನಿವಾಸ್ ಪಾತ್ರ ಎಂಬವರು ಜನವರಿ 2021 ರಿಂದ ಜೈಲಿನಲ್ಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !