ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಕೇರಳ ರಾಜ್ಯ ಕೇರಳಂ ಆಗಿ ಮರುನಾಮಕರಣ ಮಾಡಲಾಗುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಮೂರು ನಗರದ ಹೆಸರು ಬದಲಾವಣೆಗೆ ಘೋಷಣೆ ಮಾಡಲಾಗಿದೆ.
ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು, ಮೂರು ನಗರಗಳ ಹೆಸರು ಬದಲಾವಣೆ ಮಾಡಲಾಗುವುದು ಎಂದಿದ್ದಾರೆ. ಈ ಮೂರು ನಗರಗಳೆಂದರೆ:
ರಾಜಸ್ಥಾನದಲ್ಲಿರುವ ಏಕೈಕ ಪರ್ವತ ಪ್ರದೇಶಗಳ ಪ್ರವಾಸಿ ತಾಣ ಮೌಂಟ್ ಅಬು. ಇದೀಗ ಮೌಂಟ್ ಅಬು ಮೌಂಟ್ ಅಬು ಹೆಸರನ್ನು ಅಬು ರಾಜ್ ಎಂದು ಮರುನಾಮಕರಣ ಮಾಡಲು ರಾಜಸ್ಥಾನ ಸರ್ಕಾರ ಮುಂದಾಗಿದೆ.
ಇನ್ನು ಜಹಝಪುರ ರಜಪೂತರ ರಾಜರ ಪ್ರಮುಖ ಸ್ಥಳವಾಗಿತ್ತು. ರಾಜ ಮಹಾರಾಜರ ಕಾಲದಲ್ಲೇ ಇದು ರಜಪೂತರ ಆಳ್ವಿಕೆಯ ಪ್ರದೇಶವಾಗಿತ್ತು. ದಾಳಿಕೋರರ ದಾಳಿಗೆ ನಲುಗಿದ ಇದು ಜಹಝ್‌ಪುರ ಎಂದಾಗಿತ್ತು. ಇದೀಗ ರಾಜಸ್ಥಾನ ಸರ್ಕಾರ ಯಗ್ಯಾಪುರ್ ಎಂದು ಮರುನಾಮಕರಣ ಮಾಡುತ್ತಿದೆ.
ಇನ್ನು ಕಾಮಾ ನಗರ ಭಗವಾನ್ ಶ್ರೀಕೃಷ್ಣನ ಜೊತೆ ಬೆಸೆದುಕೊಂಡಿರುವ ನಗರ. ಈ ನಗರದ ಹೆಸರನ್ನು ಕಾಮವನ ಎಂದು ಮರುನಾಮಕರಣ ಮಾಡಲಾಗುತ್ತಿದೆ.



