April 16, 2026
Thursday, April 16, 2026
spot_img

ಕೊಲಂಬೊದಲ್ಲಿ ರೋಚಕ ತಿರುವು: ಪಂದ್ಯ ಕೈಚೆಲ್ಲಿದ ನ್ಯೂಜಿಲೆಂಡ್, ಇಂಗ್ಲೆಂಡ್ ಸೆಮಿಫೈನಲ್‌ಗೆ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂಪರ್ 8 ಹಂತದಲ್ಲಿ ರೋಚಕ ತಿರುವು ಕಂಡ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಅಸಾಧಾರಣ ಹೋರಾಟದ ಮೂಲಕ ಗೆಲುವು ದಾಖಲಿಸಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಟೀಮ್ ಗೆಲುವಿನಂಚಿಗೆ ಬಂದು ನಿಂತಿದ್ದರೂ, ಅಂತಿಮ ಕ್ಷಣಗಳಲ್ಲಿ ಪಂದ್ಯ ಕೈ ತಪ್ಪಿತು.

ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಉತ್ತಮ ಆರಂಭ ಕಂಡು 159 ರನ್‌ಗಳನ್ನು ಕಲೆಹಾಕಿತು. ಆರಂಭಿಕರು ಚುರುಕಾಗಿ ಆಡಿದರೂ ಮಧ್ಯ ಓವರ್‌ಗಳಲ್ಲಿ ಸ್ಪಿನ್ ದಾಳಿಗೆ ಮಣಿಯಬೇಕಾಯಿತು. 180 ರನ್ ಗುರಿ ಸಾಧಿಸುವ ಲಕ್ಷಣ ಕಂಡಿದ್ದರೂ ಕೊನೆಯಲ್ಲಿ ರನ್ ವೇಗ ಕುಂಠಿತವಾಯಿತು.

ಇದನ್ನೂ ಓದಿ:

ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. 17ನೇ ಓವರ್ ಅಂತ್ಯಕ್ಕೆ ಪಂದ್ಯ ಕಿವೀಸ್ ಹಿಡಿತದಲ್ಲೇ ಇತ್ತು. ಆದರೆ ಕೊನೆಯ ಮೂರು ಓವರ್‌ಗಳಲ್ಲಿ ವಿಲ್ ಜ್ಯಾಕ್ಸ್ ಮತ್ತು ರೆಹಾನ್ ಅಹ್ಮದ್ ಸಿಡಿಲಿನ ಆಟ ಪ್ರದರ್ಶಿಸಿ ಪಂದ್ಯ ತಿರುಗಿಸಿದರು. 19.3 ಓವರ್‌ಗಳಲ್ಲಿ ಗುರಿ ತಲುಪಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ಇನ್ನೊಂದೆಡೆ, ಶ್ರೀಲಂಕಾ–ಪಾಕಿಸ್ತಾನ ಪಂದ್ಯ ಫಲಿತಾಂಶದ ಮೇಲೆ ನ್ಯೂಜಿಲೆಂಡ್ ಸೆಮಿಫೈನಲ್ ಭವಿಷ್ಯ ನಿರ್ಧಾರವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !