April 15, 2026
Wednesday, April 15, 2026
spot_img

ಥಾಂಕ್ಯೂ ಮೈ ಫ್ರೆಂಡ್….ಇರಾನ್ ವಿರುದ್ಧ ಕ್ಷಿಪಣಿ ದಾಳಿ ಬಳಿಕ ನೆತನ್ಯಾಹು ಫಸ್ಟ್ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಇರಾನ್ ರಾಜಧಾನಿ ಟೆಹರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಮತ್ತು ಅಧ್ಯಕ್ಷರ ಭವನಗಳ ಗುರಿಯಾಗಿಸಿ ದಾಳಿ ನಡೆದಿದ್ದು, ನಗರದಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ.

ಇದರ ಬಳಿಕ ಮೊದಲ ಬಾರಿಗೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಾಗರಿಕರಿಗೆ ವೀಡಿಯೊ ಸಂದೇಶ ನೀಡಿದ್ದು, ಐತಿಹಾಸಿಕ ನಾಯಕತ್ವಕ್ಕಾಗಿ ನಮ್ಮ ಮಹಾನ್ ಸ್ನೇಹಿತ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ.

47 ವರ್ಷಗಳಿಂದ, ಅಯತೊಲ್ಲಾ ಆಡಳಿತ ಅನೇಕ ಅಮೆರಿಕನ್ನರನ್ನು ಕೊಂದಿದೆ. ತನ್ನದೇ ಆದ ಜನರನ್ನು ಕಗ್ಗೊಲೆ ಮಾಡಿದೆ. ಈ ಕೊಲೆಗಡುಕ ಭಯೋತ್ಪಾದಕ ಆಡಳಿತವು ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ಬಲಿಷ್ಟವಾಗಲು ಅವಕಾಶ ನೀಡಬಾರದು ಎಂದು ನೆತನ್ಯಾಹು ಹೇಳಿದ್ದಾರೆ.

ಯುಎಸ್ ಜೊತೆಗಿನ ನಮ್ಮ ಜಂಟಿ ಕಾರ್ಯಾಚರಣೆಯಿಂದ ಕೆಚ್ಚೆದೆಯ ಇರಾನಿನ ಜನರು ತಮ್ಮ ಹಣೆಬರಹವನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಪರಿಸ್ಥಿತಿಗಳನ್ನು ಸೃಷ್ಟಿಸಿದೆ . ಈ ಯುದ್ಧವು ಆಡಳಿತದ ವಿರುದ್ಧವಾಗಿದೆಯೇ ಹೊರತು ಇರಾನ್ ಜನರ ವಿರುದ್ಧವಲ್ಲ. ಅಲ್ಲಿನಎಲ್ಲಾ ವರ್ಗದ ಜನರ ವಿರುದ್ಧದ ದಬ್ಬಾಳಿಕೆಯ ತೊಡೆದುಹಾಕಲು ಮತ್ತು ಶಾಂತಿ ತರಲು ಸಮಯ ಬಂದಿದೆ ಎಂದಿದ್ದಾರೆ.

ಮುಂಬರುವ Roaring Lion ದಿನಗಳು ನಮ್ಮೆಲ್ಲರಿಂದ ತಾಳ್ಮೆ ಮತ್ತು ಸ್ಥೈರ್ಯವನ್ನು ಬಯಸುತ್ತವೆ. ನಾವು ಒಟ್ಟಿಗೆ ನಿಲ್ಲುತ್ತೇವೆ, ಒಟ್ಟಿಗೆ ಹೋರಾಡುತ್ತೇವೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !