February 28, 2026
Saturday, February 28, 2026
spot_img

ಮೊದಲ ದಿನವೇ ಇರಾನ್‌ಗೆ ಮರ್ಮಾಘಾತ: ದಾಳಿಯಲ್ಲಿ ಸೇನಾ ಮುಖ್ಯಸ್ಥ ಅಮೀರ್ ಹತಾಮಿ ಸಾವು??

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕವಾಗಿ ಆತಂಕ ಹುಟ್ಟಿಸಿರುವ ಇಸ್ರೇಲ್, ಅಮೆರಿಕ, ಇರಾನ್ ನಡುವಿನ ಯುದ್ಧಾರಂಭದಲ್ಲಿ ಇರಾನ್‌ಗೆ ಮೊದಲ ದಿನವೇ ಭರ್ಜರಿ ಶಾಕ್ ಸಿಕ್ಕಿದ್ದು, ಸೇನಾ ಮುಖ್ಯಸ್ಥ ಅಮೀರ್ ಹತಾಮಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಇಸ್ರೇಲ್ ಮಾಧ್ಯಗಳು ವರದಿ ಮಾಡಿವೆ.

ಆದರೆ ಇರಾನ್ ಸರ್ಕಾರವಾಗಲೀ, ಇಸ್ರೇಲ್ ಸೇನೆಯಾಗಲೀ ಹತಾಮಿ ಸಾವನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ರಕ್ಷಣಾ ಸಚಿವರಾಗಿ, ಇರಾನ್‌ನ ಕ್ಷಿಪಣಿ ಹಾಗೂ ಡ್ರೋಣ್ ವ್ಯವಸ್ಥೆಗೆ ಹೊಸ ರೂಪ ನೀಡಿರುವ ಖ್ಯಾತಿ ಹತಾಮಿ ಅವರಿಗಿದೆ. ಖೋರ್ರಾಮ್‌ಶಹರ್, ಫತೇಹ್‌ನಂತಹ ಸುಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಭಿವೃದ್ಧಿ ಹಿಂದೆಯೂ ಅವರ ಅಪಾರವಾದ ಶ್ರಮವಿದೆ. ಇದಲ್ಲದೆ ಆಪರೇಷನ್ ಮರ್ಸಾದ್‌ನಂತಹ ಪ್ರಮುಖ ಕಾರ್ಯಾಚರಣೆಗಳಲ್ಲಿ ದಿಟ್ಟ ಪಾತ್ರ ವಹಿಸಿದ ಖ್ಯಾತಿಯೂ ಅವರಿಗಿದೆ. ಯುದ್ಧದಲ್ಲಿ ಅವರ ಸಾವು ನಿಜವೇ ಆಗಿದ್ದರೆ ಅದು ಇರಾನ್‌ಗೆ ಖಂಡಿತವಾಗಿಯೂ ಮರ್ಮಾಘಾತವಾಗಲಿದೆ.


1966ರಲ್ಲಿ ಇರಾನ್‌ನ ಝಂಜಾನ್‌ನಲ್ಲಿ ಜನಿಸಿದ ಅಮೀರ್ ಹತಾಮಿ, ತನ್ನ 14ನೇ ವಯಸ್ಸಿಗೆ ಬಸಿಜ್ ಪಡೆಗೆ ಸ್ವಯಂಸೇವಕರಾಗಿ ಸೇರುವ ಮೂಲಕ ಸೈನ್ಯಕ್ಕೆ ಕಾಲಿಟ್ಟಿದ್ದರು. ಬಳಿಕ 1980ರ ದಶಕದಲ್ಲಿ ಹತಾಮಿ ಇರಾನ್-ಇರಾಕ್ ಯುದ್ಧದಲ್ಲಿ ಕೂಡಾ ಸಕ್ರಿಯವಾಗಿ ಭಾಗವಹಿಸಿದ್ದರು. ಅಧ್ಯಕ್ಷ ಹಸನ್ ರೂಹಾನಿ ಅವರ ಆಡಳಿತದಲ್ಲಿ 2017 ರಿಂದ 2021 ರವರೆಗೆ ಮೇ.ಜ. ಹತಾಮಿ ಇರಾನ್‌ನ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !