July 30, 2026
Thursday, July 30, 2026
spot_img

ಇರಾನ್ -ಇಸ್ರೇಲ್ ಯುದ್ಧ ಕಾರ್ಮೋಡ: ಕೇರಳದಿಂದ ಗಲ್ಫ್​ ರಾಷ್ಟ್ರಗಳತ್ತ ವಿಮಾನ ಹಾರಾಟ ರದ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಯಿಯಿಂದ ಗಲ್ಫ್​ ರಾಷ್ಟ್ರದಲ್ಲೂ ಯುದ್ಧದ ಕಾರ್ಮೋಡ ಆವರಿಸಿದೆ. ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸುತ್ತಿದ್ದಂತೆ, ಭಾರತದ ವಲಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಯುದ್ಧದ ಕಾರ್ಮೋಡ ಹಿನ್ನೆಲೆ ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆಯು ಸ್ಥಗಿತಗೊಂಡಿದೆ. ತಿರುವನಂತಪುರಂನಿಂದ ದುಬೈ ಮತ್ತು ದೋಹಾಗೆ ಹೋಗುವ ಏರ್ ಇಂಡಿಯಾದ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (CIAL) ವಿಮಾನ ಕಾರ್ಯಾಚರಣೆಗಳ ಮೇಲೆ ಈಗಾಗಲೇ ತೀವ್ರವಾಗಿ ಪರಿಣಾಮ ಬೀರಿದೆ.

ಕಣ್ಣೂರಿನಿಂದ ದೋಹಾಗೆ ಹೋಗುವ ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನಗಳು, ಕರಿಪುರ (ಕೊಝಿಕೋಡ್) ವಿಮಾನ ನಿಲ್ದಾಣದಲ್ಲಿ ನಾಲ್ಕು ಏರ್ ಇಂಡಿಯಾ ಸೇವೆಗಳು ಮತ್ತು ಮೂರು ಇಂಡಿಗೋ ಸೇವೆಗಳನ್ನು ರದ್ದುಗೊಳಿಸಲಾಗಿದೆ. ವಾಯು ಕಾರಿಡಾರ್‌ಗಳನ್ನು ಸುರಕ್ಷಿತವಾಗಿ ಪುನಃ ತೆರೆಯುವವರೆಗೆ ಪರಿಸ್ಥಿತಿ ಹೀಗೆ ಇರುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !