February 28, 2026
Saturday, February 28, 2026
spot_img

ಅಜಿತ್ ಪವಾರ್ ಸಾವು ವಿಮಾನ ಅಪಘಾತವೇ? ಕೊಲೆಯೇ? ಸಿಐಡಿ ತನಿಖೆಗೆ ಎನ್​ಸಿಪಿ ನಾಯಕ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರ ಸಾವು ವಿಮಾನ ಅಪಘಾತವೇ ಅಥವಾ ಕೊಲೆಯೇ? ಎಂಬ ಗಂಭೀರ ಶಂಕೆಗಳಿವೆ.

ಈ ಕುರಿತು ಎನ್​ಸಿಪಿ ಶಾಸಕ ರೋಹಿತ್ ಪವಾರ್ ಅವರು ಅಪಘಾತದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ. ತನ್ನ ಬಳಿಕ ದುರಂತಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಪುರಾವೆಗಳಿವೆ ಎಂದು ಅವರು ಹೇಳಿಕೊಂಡಿದ್ದಾರೆ.

ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಹೇಳಿದಂತೆ, ‘ಎಎಐಬಿ’ಯ ವರದಿಯಿಂದ ಸತ್ಯವೂ ತಿಳಿಯಲಿದೆ. ಸೋಮವಾರ ನಾವು ನಮ್ಮ ಹೊಸ ಮಾಹಿತಿ ಮತ್ತು ಪುರಾವೆಗಳನ್ನು ಪ್ರಸ್ತುತಪಡಿಸುತ್ತೇವೆ ಎಂದು ರೋಹಿತ್​ ಪವಾರ್​ ಅವರು ಹೇಳಿದ್ದಾರೆ.

ಡಿಜಿಸಿಎ ವಿಎಸ್ಆರ್ ಏವಿಯೇಷನ್‌ಗೆ ಹೇಗೆ ಅನುಮತಿ ನೀಡಿತು? ಸುಟ್ಟುಹೋದ ಕಪ್ಪು ಪೆಟ್ಟಿಗೆಯನ್ನು ವಿದೇಶಕ್ಕೆ ಕಳುಹಿಸಲಾಗಿದೆಯೇ ಅಥವಾ ಅದು ಏನಾಯಿತು? ಕಲಿನಾ ಗೇಟ್ ಸಂಖ್ಯೆ 8 ರಿಂದ ಬಾರಾಮತಿ ರನ್‌ವೇಗೆ ನಿಖರವಾಗಿ ಏನಾಯಿತು? ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಬೇಕು. ಈ ಕುರಿತು ತುರ್ತು ನ್ಯಾಯಾಲಯ ಮತ್ತು ಸಿಐಡಿ ವಿಚಾರಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !