August 30, 2026
Sunday, August 30, 2026
spot_img

ರಾಯರ ಆರಾಧನಾ ಮಹೋತ್ಸವ: ಮಂತ್ರಾಲಯದಲ್ಲಿ ಸಪ್ತರಥೋತ್ಸವದ 4ನೇ ದಿನದ ವಿಶೇಷ ಪೂಜೆ

ಹೊಸದಿಗಂತ ವರದಿ ರಾಯಚೂರು:

 ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮೀಜಿ ಬೃಂದಾವನಸ್ಥರಾಗಿ ಪ್ರಸ್ತುತಕ್ಕೆ 355 ವಸಂತಗಳು ಸಂದ ಸಂದರ್ಭದಲ್ಲಿ ಮಂತ್ರಾಲಯದ ಪೀಠಾಧ್ಯಕ್ಷ ಸುಬುಧೇಂದ್ರತೀರ್ಥ ಶ್ರೀಗಳು ವಿಶೇಷ ಪೂಜೆ ಸಮರ್ಪಿಸಿದರು.

ಮಂತ್ರಾಲಯದ ಗುರು ರಾಘವೇಂದ್ರರ 355ನೇ ಆರಾಧನಾ ಮಹೋತ್ಸವ ಅಂಗವಾಗಿ ಆಚರಿಸಲಾಗುತ್ತಿರುವ ಸಪ್ತರಾಯ್ರೋತ್ಸವದ ನಾಲ್ಕನೇ ದಿನ ಮಧ್ಯಾರಾಧನೆಯ ದಿನದಂದು ಮಂತ್ರಾಲಯದ ಸುಬುಧೇಂದ್ರತೀರ್ಥ ಸ್ವಾಮೀಜಿ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ಫಲ, ಪಂಚಾಮೃತಾಭಿಷೇಕ ನೆರವೇರಿಸಿದರು.

 ಅಪಾರ ಪ್ರಮಾಣದ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ಉತ್ತತ್ತಿ, ಗೋಡಂಬಿ, ಬಾದಾಮಿ, ದ್ರಾಕ್ಷಿ, ಖರ್ಜೂರ, ಎಳೆನೀರು, ಗಂಗಾಜಲದಿಂದ ಗುರುರಾಯರ ಮೂಲ ಬೃಂದಾವನಕ್ಕೆ ಅತ್ಯಂತ ವೈಭವದಿಂದ ಅಭಿಷೇಕವನ್ನು ನೆರವೇರಿಸಿದರು.

 ಇದೇ ಸಂದರ್ಭದಲ್ಲಿ ಅಷ್ಟ ದಿಕ್ಕುಗಳಲ್ಲಿ ಮಂಗಳಾರತಿಯನ್ನು ನೆರವೇರಿಸಿದರು. ನಂತರ ತುಳಸಿ, ಪುಷ್ಪಾಲಂಕೃತ ಮೂಲಬೃಂದಾವನಕ್ಕೆ ಮಹಾ ಮಂಗಳಾರತಿಯನ್ನು ನೆರವೇರಿಸಿದರು.

ಇದನ್ನೂ ಓದಿ:

 ಶ್ರೀ ರಾಘವೇಂದ್ರ ಸ್ವಾಮಿಗಳವರ ಮಧ್ಯಾರಾಧನಾ ಮಹೋತ್ಸವದ ಶುಭ ಸಂದರ್ಭದಲ್ಲಿ ಮಂತ್ರಾಲಯದಲ್ಲಿ ಲಕ್ಷಾಂತರ ಭಕ್ತರು ಶ್ರೀ ರಾಯರ ದಿವ್ಯ ದರ್ಶನ ಪಡೆದರು. ತದನಂತರ ಶ್ರೀ ರಾಯರ ಭವ್ಯ ಪ್ರಾತಃಕಾಲ ರಥೋತ್ಸವವು ಜರುಗಿತು. ನಂತರ ಸ್ವಾಮೀಜಿಯವರು ಪವಿತ್ರ ಶ್ರೀ ಬ್ರಹ್ಮಕರಾರ್ಚಿತ ಮೂಲರಾಮದೇವರ ಪೂಜೆಯನ್ನು ನೆರವೇರಿಸಿ ಸಮಸ್ತ ಭಕ್ತರ ಕ್ಷೇಮ ಹಾಗೂ ಅಭ್ಯುದಯಕ್ಕಾಗಿ ಪ್ರಾರ್ಥಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !