June 18, 2026
Thursday, June 18, 2026
spot_img

CINE | ‘ದಿ ಕೇರಳ ಸ್ಟೋರಿ 2’: ಅಂದುಕೊಂಡಂತೆ ಕಲೆಕ್ಷನ್ ಆಗಿಲ್ಲ, ಎರಡು ದಿನದಲ್ಲಿ ಗಳಿಸಿದ್ದೆಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿವಾದಗಳ ಹೊಡೆತದಲ್ಲೇ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ 2’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಹೈಕೋರ್ಟ್ ಅನುಮತಿ ತಡವಾಗಿ ಸಿಕ್ಕ ಕಾರಣ ಫೆಬ್ರವರಿ 27ರಂದು ಕೆಲವೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಈ ಸಿನಿಮಾ ಮೊದಲ ದಿನ ಸುಮಾರು 75 ಲಕ್ಷ ರೂಪಾಯಿ ಸಂಗ್ರಹಿಸಿತು.

ಮುಂದಿನ ದಿನವಾದ ಫೆಬ್ರವರಿ 28ರಂದು ಬಿಡುಗಡೆಯಾಗಿ 4.65 ಕೋಟಿ ರೂಪಾಯಿ ಗಳಿಸಿದೆ. ಹೀಗಾಗಿ ಎರಡು ದಿನಗಳ ಒಟ್ಟು ವಸೂಲಿ ಅಂದಾಜು 5.40 ಕೋಟಿ ರೂಪಾಯಿ.

ಇದನ್ನೂ ಓದಿ:

2023ರಲ್ಲಿ ಬಿಡುಗಡೆಯಾದ ದಿ ಕೇರಳ ಸ್ಟೋರಿ ಮೊದಲ ದಿನವೇ 8 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಒಟ್ಟು 242 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಸೀಕ್ವೆಲ್‌ಗೆ ಅದೇ ಮಟ್ಟದ ಓಪನಿಂಗ್ ಸಿಕ್ಕಿಲ್ಲ.

ಚಿತ್ರದಲ್ಲಿ ಕೇರಳವನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಹಿನ್ನೆಲೆ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಪರಿಣಾಮವಾಗಿ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ರದ್ದುಗೊಂಡಿದ್ದು, ಕೇರಳದಲ್ಲಿನ ಕಲೆಕ್ಷನ್ ಹಿನ್ನಡೆ ಕಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !