March 2, 2026
Monday, March 2, 2026
spot_img

ಇರಾನ್ ಮೇಲೆ ದಾಳಿ: ಇನ್ನೂ ನಾಲ್ಕು ವಾರ ಯುದ್ಧ ಮುಂದುವರಿಯುತ್ತೆ ಎಂದ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ಜಂಟಿ ಕಾರ್ಯಾಚರಣೆ ವೇಗ ಪಡೆದುಕೊಂಡಿದ್ದು, ಮೊದಲ ಹಂತದಲ್ಲೇ 48 ಇರಾನಿನ ಪ್ರಮುಖ ನಾಯಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಕಾರ್ಯಾಚರಣೆ ನಿರೀಕ್ಷೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ಸಾಗುತ್ತಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಇರಾನ್ ಮೇಲೆ ನಡೆಯುತ್ತಿರುವ ದಾಳಿ ಹಲವು ಮಹತ್ವದ ಗುರಿಗಳನ್ನು ಹೊಡೆದಿದೆ ಎಂದು ಹೇಳಿದ ಟ್ರಂಪ್, ಇನ್ನೂ ಕೆಲವು ಗುರಿಗಳು ಬಾಕಿ ಉಳಿದಿದ್ದು ಅವುಗಳ ಬಗ್ಗೆ ಅಮೆರಿಕಕ್ಕೆ ಸ್ಪಷ್ಟ ಮಾಹಿತಿ ಇದೆ ಎಂದಿದ್ದಾರೆ. ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗುವವರೆಗೆ ಸೇನಾ ಕ್ರಮಗಳು ಮುಂದುವರಿಯಲಿವೆ ಎಂದು ಎಚ್ಚರಿಸಿದರು.

ಇದನ್ನೂ ಓದಿ:

ಯುದ್ಧದ ಅವಧಿ ಕುರಿತು ಮಾತನಾಡಿದ ಅವರು, ಆರಂಭಿಕ ಅಂದಾಜು ಪ್ರಕಾರ ಈ ಸೈನಿಕ ಕಾರ್ಯಾಚರಣೆ ನಾಲ್ಕು ವಾರಗಳವರೆಗೆ ಮುಂದುವರಿಯಬಹುದು ಎಂದು ತಿಳಿಸಿದರು. ಇರಾನ್ ದೊಡ್ಡ ರಾಷ್ಟ್ರವಾಗಿರುವುದರಿಂದ ಪರಿಸ್ಥಿತಿಯನ್ನು ಅವಲಂಬಿಸಿ ಅವಧಿ ಕಡಿಮೆ ಅಥವಾ ಹೆಚ್ಚು ಆಗುವ ಸಾಧ್ಯತೆ ಇದೆ ಎಂದರು.

ಇನ್ನೊಂದೆಡೆ, ಇರಾನ್ ಮಾತುಕತೆಗೆ ಸಿದ್ಧತೆ ತೋರಿದರೆ ಅಮೆರಿಕ ಮುಕ್ತ ಮನಸ್ಸಿನಿಂದ ಸಂವಾದಕ್ಕೆ ಸಿದ್ಧವಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಈ ಅವಕಾಶವನ್ನು ಮೊದಲು ಬಳಸಬೇಕಾಗಿತ್ತು ಎಂಬ ಸಂದೇಶವನ್ನೂ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !