March 2, 2026
Monday, March 2, 2026
spot_img

CINE | ರಣಬಾಲಿ ಪೋಸ್ಟರ್‌ ನೋಡಿದ್ದೀರಾ? ಇದು ಪೋಸ್‌ ಅಲ್ವಂತೆ, ಸೆಟ್‌ನಲ್ಲಿ ತೆಗೆದ ಫೋಟೊ ಅಷ್ಟೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ನಟನೆಯ ರಣಬಾಲಿ ಸಿನಿಮಾ ಪೋಸ್ಟರ್‌ ರಿಲೀಸ್‌ ಆಗಿದ್ದು, ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ನಮ್ಮ ಪೂರ್ವಜರು ಅವರ ಮದುವೆ ಸಮಯದಲ್ಲಿ ನೋಡೋಕೆ ಹೀಗೆ ಇದ್ರು ಎಂದು ಜನ ಮಾತನಾಡ್ತಿದ್ದಾರೆ. ರಶ್ಮಿಕಾ ವಿಜಯ್‌ ಜಾಗದಲ್ಲಿ ನಾವು ಇದ್ರೆ ಹೇಗೆ ಕಾಣಬಹುದು ಎಂದು ಎಐ ಮೂಲಕ ನೋಡಿಕೊಳ್ತಿದ್ದಾರೆ. ಇದರ ಬೆನ್ನಲ್ಲೇ ಈ ಪೋಸ್ಟರ್‌ನ ಹಿಂದಿನ ಕಥೆ ಸುದ್ದಿಯಾಗಿದೆ.

https://www.instagram.com/reels/DVXnkzJiLBi

ನಿರ್ದೇಶಕ ರಾಹುಲ್‌ ಸಂಕಿರ್ತ್ಯಾನ್‌ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ, ಇದು ಪ್ಲಾನ್‌ ಆಗಿ ಮಾಡಿದ ಪೋಸ್ಟರ್‌ ಅಲ್ವೇ ಅಲ್ಲ. ಸೆಟ್‌ನಲ್ಲಿ ಇದ್ದಕ್ಕಿದ್ದಂತೆ ಸಿಕ್ಕ ಶಾಟ್‌. ಇದು ರಶ್ಮಿಕಾ ಹಾಗೂ ವಿಜಯ್‌ ಕಳೆದ ಜನ್ಮದ ಮದುವೆ ಫೋಟೊದಂತೆ ಕಾಣಿಸುತ್ತದೆ ಎಂದಿದ್ದಾರೆ.

ಅವರಿಬ್ಬರೂ ಶೂಟಿಂಗ್‌ ಮಧ್ಯೆ ಕಟ್ಟೆ ಮೇಲೆ ಕುಳಿತಾಗ ಕ್ಲಿಕ್ಕಿಸಿದ ಫೋಟೊ ಇದಾಗಿದೆಯಂತೆ. ಅದನ್ನೇ ಇಂಪ್ರವೈಸ್‌ ಮಾಡಿ ಪೋಸ್ಟರ್‌ ಆಗಿ ಡೆವಲಪ್‌ ಮಾಡಿದ್ದಾರೆ. ಕಟ್ಟೆ ಮೇಲೆ ಕುಳಿತ ಫೋಟೊ, ಪೋಸ್‌ ಹಾಗೂ ಮುಖದ ಎಕ್ಸ್‌ಪ್ರೆಶನ್ಸ್‌ ಎಲ್ಲವೂ ನ್ಯಾಚುರಲ್‌ ಆಗಿದ್ದು ಎನ್ನಲಾಗಿದೆ. ಈ ಬಗ್ಗೆ ತಂಡ ಅಧಿಕೃತ ಮಾಹಿತಿ ನೀಡಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !