September 6, 2026
Sunday, September 6, 2026
spot_img

ಬಿಗ್ ಬಾಸ್ ಹೊಸ ಸಾಮ್ರಾಜ್ಯ ಹೇಗಿರಲಿದೆ? ಕ್ಯಾಪ್ಟನ್ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಇಂದಿನಿಂದ ಅಸಲಿ ಆಟ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇಷ್ಟು ದಿನಗಳ ಕಾತುರಕ್ಕೆ ಕೊನೆಗೂ ತೆರೆ ಬೀಳುವ ಸಮಯ ಹತ್ತಿರ ಬಂದಿದೆ. ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ ಹೊಸ ಸೀಸನ್ ಅದ್ದೂರಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ 7 ಗಂಟೆಗೆ ಬಿಗ್ ಬಾಸ್ ಗ್ರ್ಯಾಂಡ್ ಟೇಕ್‌ ಆಫ್‌ ನಡೆಯಲಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮನೆಮಾಡಿದೆ. ಪ್ರತಿ ಬಾರಿಗಿಂತ ಈ ಬಾರಿಯ ಬಿಗ್ ಬಾಸ್ ಸಾಮ್ರಾಜ್ಯ ಹೇಗಿರಲಿದೆ ಎಂಬುದನ್ನು ತೋರಿಸಲು ಸ್ವತಃ ‘ಕ್ಯಾಪ್ಟನ್’ ಕಿಚ್ಚ ಸುದೀಪ್ ಸಜ್ಜಾಗಿದ್ದಾರೆ.‌

ಟ್ವಿಸ್ಟ್ ಆಂಡ್ ಟರ್ನ್‌ಗಳ ಹೊಸ ಲೋಕ

ಬಿಗ್ ಬಾಸ್ ಪ್ರಪಂಚ ಹೇಗಿದೆ ಗೊತ್ತಾ? ಅನ್ನೋ ಕುತೂಹಲಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಈ ಬಾರಿ ಮನೆಯ ವಿನ್ಯಾಸ, ಸ್ಪರ್ಧಿಗಳ ಆಯ್ಕೆ ಹಾಗೂ ಆಟದ ನಿಯಮಗಳಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿದೆ ಎನ್ನಲಾಗುತ್ತಿದೆ. ಎಂದಿನಂತೆ ತನ್ನ ವಿಶಿಷ್ಟ ಶೈಲಿ ಮತ್ತು ಖಡಕ್ ನಿರೂಪಣೆಯ ಮೂಲಕ ಕಿಚ್ಚ ಸುದೀಪ್ ಅವರು ಹೊಸ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಬರಮಾಡಿಕೊಳ್ಳಲಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ಸ್, ಸೆಲೆಬ್ರಿಟಿಗಳು ಹಾಗೂ ವಿಭಿನ್ನ ರಂಗದ ದಿಗ್ಗಜರು ಈ ಬಾರಿ ಮನೆಯೊಳಗೆ ಕಾಲಿಡುತ್ತಿರುವುದು ವಿಶೇಷ.

ಇದನ್ನೂ ಓದಿ:

ಇಂದಿನಿಂದ ಸತತ ಮೂರು ತಿಂಗಳ ಕಾಲ ಕಿರುತೆರೆ ವೀಕ್ಷಕರನ್ನು ರಂಜಿಸಲು, ಜಗಳ, ಪ್ರೀತಿ, ಸ್ನೇಹ ಮತ್ತು ಮನರಂಜನೆಯ ಹೊಸ ಡೋಸ್ ನೀಡಲು ಬಿಗ್ ಬಾಸ್ ಸಾಮ್ರಾಜ್ಯ ಸಂಪೂರ್ಣವಾಗಿ ಸಿದ್ಧಗೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !