March 4, 2026
Wednesday, March 4, 2026
spot_img

HOLI | ರಂಗಿನಲ್ಲಿ ಮಿಂದೆದ್ದ ರಾಜ್ಯದ ಜನತೆ, ಎಲ್ಲೆಡೆ ಬಣ್ಣಗಳ ಹಬ್ಬದ ಸಂಭ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶಾದ್ಯಂತ ಇಂದು ಸಂಭ್ರಮದ ಹೋಳಿ ಆಚರಣೆ ಮಾಡಲಾಗಿದೆ. ಎರಡು ದಿನಗಳ ಸಂಭ್ರಮ ಇದಾಗಿದ್ದು, ನಿನ್ನೆ ಹೋಲಿಕಾ ದಹನ ಆಚರಿಸಲಾಗಿದೆ. ಇಂದು ಬಣ್ಣಗಳ ಓಕುಳಿ ಇರಲಿದೆ.

ಜಾತಿ ಮತ ಬೇಧವಿಲ್ಲದೆ ಜನರೆಲ್ಲರೂ ಸೇರಿ ಒಂದಾಗಿ ಬಣ್ಣಗಳಲ್ಲಿ ಮಿಂದೇಳುತ್ತಾರೆ. ಈ ಹಬ್ಬ ಚಳಿಗಾಲದ ಅಂತ್ಯವನ್ನು ಸಾರುತ್ತದೆ.

ಕರ್ನಾಟಕದ ಹಲವೆಡೆ ಹೋಳಿಯನ್ನು ಕಾಮನ ಹುಣ್ಣಿಮೆ ಎಂದು ಕರೆಯುತ್ತಾರೆ. ಕಾಮದೇವನ ಪ್ರತಿಮೆಯನ್ನು ನಿರ್ಮಿಸಿ ಅಲಂಕರಿಸಿ ಊರಿನ ಪ್ರಮುಖ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮಂಗಳ ವಾದ್ಯಗಳೊಂದಿಗೆ ಪೂಜೆ ಸಲ್ಲಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಈ ಆಚರಣೆ ಶಿವ–ಮನ್ಮಥ ಪ್ರಸಂಗವನ್ನು ಸ್ಮರಿಸುತ್ತದೆ.

ಹೋಳಿಯ ಬಣ್ಣದಲ್ಲಿ ಮಿಂದೇಳುವ ಮುನ್ನ ಚರ್ಮ ಹಾಗೂ ಆರೋಗ್ಯದ ಕಾಳಜಿ ಮಾಡಿ. ಎಲ್ಲರೂ ಸುರಕ್ಷಿತವಾಗಿ ಆಚರಣೆ ಮಾಡಿ.

ಹೊಸದಿಗಂತ ವತಿಯಿಂದ ಹೋಳಿ ಹಬ್ಬದ ಶುಭಾಷಯಗಳು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !