March 4, 2026
Wednesday, March 4, 2026
spot_img

India vs England: ಭಾರತ ಕ್ರಿಕೆಟ್‌ ತಂಡದ ಅಭ್ಯಾಸಕ್ಕೆ ಅಡ್ಡಿಯಾಯ್ತು ʼಗ್ರಹಣʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯಕ್ಕಾಗಿ ಟೀಂ ಇಂಡಿಯಾ ಅದ್ಭುತ ತಯಾರಿ ನಡೆಸಿದೆ. ನಾಳೆ ನಡೆಯುವ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್‌ ವಿರುದ್ಧ ಸೆಣೆಸಾಡಲಿದೆ. ಇದಕ್ಕಾಗಿ ತಯಾರಿ ಅಗತ್ಯ, ಆದರೆ ಅಭ್ಯಾಸಕ್ಕೆ ಗ್ರಹಣ ಅಡ್ಡವಾಗಿದೆ.

ಅಭ್ಯಾಸದ ಮೂಲ ವೇಳಾಪಟ್ಟಿಯಂತೆ ಸಂಜೆ ಆರು ಗಂಟೆಯಿಂದ ತರಬೇತಿ ಆರಂಭವಾಗಬೇಕಿತ್ತು. ಆದರೆ ಗ್ರಹಣದ ಹಿನ್ನೆಲೆ ಸಂಜೆ 7:20ಕ್ಕೆ ಆರಂಭಿಸಲಾಯಿತು. ಹಿಂದು ಸಂಪ್ರದಾಯದಲ್ಲಿ ಗ್ರಹಣದ ಸಮಯದಲ್ಲಿ ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡುವುದಿಲ್ಲ.

ಇತ್ತ ಚಂದ್ರಗ್ರಹಣವು ಮಧ್ಯಾಹ್ನ 3:20 ರಿಂದ ಸಂಜೆ 6:47 ರವರೆಗೆ ಇದ್ದ ಆ ಅವಧಿಯನ್ನು ಅಶುಭ ಎಂದು ಪರಿಗಣಿಸಲಾಗಿದೆ. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಗ್ರಹಣ ಮುಗಿದ ನಂತರವೇ ಮೈದಾನಕ್ಕಿಳಿಯಲು ನಿರ್ಧರಿಸಿತು. ಅಲ್ಲದೆ ಗ್ರಹಣ ಮುಗಿಯುವವರೆಗೆ ಕ್ರೀಡಾಂಗಣದ ಫ್ಲಡ್‌ಲೈಟ್‌ಗಳನ್ನು ಕೂಡ ಆನ್ ಮಾಡಿರಲಿಲ್ಲ.

ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯವು ಇಂದು (ಮಾ.4) ನಡೆಯಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ಫೈನಲ್​ಗೆ ಪ್ರವೇಶಿಸಲಿದೆ.

ಇನ್ನು ನಾಳೆ, ಮಾರ್ಚ್ 5 ರಂದು ನಡೆಯಲಿರುವ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಮ್ಯಾಚ್​ನಲ್ಲಿ ಜಯಗಳಿಸುವ ತಂಡ ಫೈನಲ್​ಗೆ ಅರ್ಹತೆ ಪಡೆಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !