ಹೊಸದಿಗಂತ ವರದಿ ಬೆಳಗಾವಿ :
ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಜರೇಯ ಯಡೂರ ವೀರಭದ್ರೇಶ್ವರ ದೇವಾಲಯದ ರಾಜಗೋಪುರಗಳ ಲೋಕಾರ್ಪಣೆ ಹಾಗೂ ವಿವಿಧ ಕಾರ್ಯಕ್ರಮಗಳಿಗಾಗಿ ಮಾ.5 (ಗುರುವಾರ) ರಂದು ಬೆಳಿಗ್ಗೆ 9 ಗಂಟೆಗೆ ಗೌರವಾನ್ವಿತ ಉಪರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರು ಆಗಮಿಸುತ್ತಿದ್ದಾರೆ.
ಮಾ.5 ರಂದು ಚಿಕ್ಕೋಡಿ ತಾಲೂಕಿನ ಯಡೂರ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಚಿಕ್ಕೋಡಿಯಿಂದ ಯಡೂರ ಮಾರ್ಗದಲ್ಲಿನ ಪಿ.ಯು.ಸಿ. ಪರೀಕ್ಷಾ ಕೇಂದ್ರಗಳಲ್ಲಿನ ಪರೀಕ್ಷಾರ್ಥಿಗಳು ಬೇಗನೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ಮನವಿ ಮಾಡಿರುತ್ತಾರೆ.
ನಾಳೆ ಯಡೂರ ವಿರಭದ್ರೆಶ್ವರ ದೇವಸ್ಥಾನಕ್ಕೆ ಉಪರಾಷ್ಟ್ರಪತಿ ರಾಜ್ಯಪಾಲರ ಆಗಮನದಿಂದಸಗಿಯೇ ಇಂದಿನಿಂದ ಮಾಜರಿ ಯಡೂರು ಸುಕ್ಷೇತ್ರದಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಂದೂಬಸ್ತ್ ಮಾಡಲಾಗಿದೆ, ಜನದೊಟ್ಟನೆ ವಾಹನಗಳ ಸಂಚಾರ ಯಾಗದಂತೆ ಪೊಲೀಸ್ ಕಟ್ಟಚ್ಚೆರ ವಹಿಸಲಾಗಿದೆ.



