March 4, 2026
Wednesday, March 4, 2026
spot_img

ಪಾಕ್ ಕ್ರಿಕೆಟ್‌ನಲ್ಲಿ ‘ಸರ್ಜರಿ’ ಶುರು: ಬಾಂಗ್ಲಾ ಸರಣಿಗೆ ಬಾಬರ್ ಔಟ್, ಆರು ಹೊಸಬರಿಗೆ ಮಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಪಾಕಿಸ್ತಾನ ತಂಡದಲ್ಲಿ ಈಗ ದೊಡ್ಡ ಮಟ್ಟದ ಬದಲಾವಣೆಗಳ ಗಾಳಿ ಬೀಸುತ್ತಿದೆ. ವಿಶ್ವಕಪ್‌ನ ಸೂಪರ್ 8 ಹಂತದಲ್ಲೇ ಸೋತು ಹೊರಬಿದ್ದಿದ್ದ ಪಾಕಿಸ್ತಾನ ತಂಡದ ಆಟಗಾರರಿಗೆ ಇತ್ತೀಚೆಗಷ್ಟೇ ದಂಡ ವಿಧಿಸಲಾಗಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಈಗ ಸ್ಟಾರ್ ಆಟಗಾರ ಬಾಬರ್ ಆಝಂ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಗ್ ಶಾಕ್ ನೀಡಿದೆ.

ಮುಂಬರುವ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಪ್ರಕಟಿಸಲಾದ 15 ಸದಸ್ಯರ ತಂಡದಿಂದ ಬಾಬರ್ ಆಝಂ ಅವರನ್ನು ಕೈಬಿಡಲಾಗಿದೆ. ಟಿ20 ಮಾದರಿಯಲ್ಲಿ ಈಗಾಗಲೇ ಸ್ಥಾನ ಕಳೆದುಕೊಂಡಿದ್ದ ಅವರಿಗೆ, ಈಗ ಏಕದಿನ ತಂಡದಲ್ಲೂ ಸ್ಥಾನ ಸಿಕ್ಕಿಲ್ಲ.

ಮಂಡಳಿಯು ಹಿರಿಯ ಆಟಗಾರರಾದ ಸ್ಯಾಮ್ ಅಯೂಬ್ ಮತ್ತು ಮೊಹಮ್ಮದ್ ನವಾಜ್ ಅವರಿಗೂ ತಂಡದಿಂದ ಹೊರಹೋಗುವ ದಾರಿ ತೋರಿಸಿದೆ. ಆದರೆ, ವೇಗಿ ಹ್ಯಾರಿಸ್ ರೌಫ್ ತಂಡಕ್ಕೆ ಮರಳಿದ್ದು, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್ ಮತ್ತು ಮೊಹಮ್ಮದ್ ರಿಜ್ವಾನ್ ತಂಡದ ಬಲವಾಗಿದ್ದಾರೆ. ಶಹೀನ್ ಶಾ ಅಫ್ರಿದಿ ನಾಯಕತ್ವದ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ.

ತಂಡವನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಆರು ಮಂದಿ ಹೊಸ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಅಬ್ದುಲ್ ಸಮದ್, ಮಾಜ್ ಸದಾಕತ್, ಮುಹಮ್ಮದ್ ಘಾಜಿ ಘೋರಿ, ಸಾದ್ ಮಸೂದ್, ಸಾಹಿಬ್ಜಾದಾ ಫರ್ಹಾನ್ ಮತ್ತು ಶಮಯಾಲ್ ಹುಸೇನ್.

ಟಿ20ಯಲ್ಲಿ ಮಿಂಚಿದ್ದ ಸಾಹಿಬ್ಜಾದಾ ಫರ್ಹಾನ್ ಈಗ ಏಕದಿನ ಕ್ರಿಕೆಟ್‌ಗೆ ಸಿದ್ಧರಾಗಿದ್ದರೆ, ಅಬ್ದುಲ್ ಸಮದ್ ತಮ್ಮ ಚೊಚ್ಚಲ ಪಂದ್ಯದ ನಿರೀಕ್ಷೆಯಲ್ಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !