September 22, 2026
Tuesday, September 22, 2026
spot_img

ಇದ್ದಕ್ಕಿದ್ದಂತೆಯೇ ಖಿನ್ನತೆ ಕಾಡುತ್ತಿದೆಯೇ? ನಿಮ್ಮ ದೇಹದಲ್ಲಿನ ಬಿ12 ಪರೀಕ್ಷಿಸಿ ನೋಡಿ

ಜೀವನದಲ್ಲಿ ಯಾವ ಸಮಸ್ಯೆಯೂ ಇಲ್ಲದಾಗಲೂ ಇದ್ದಕ್ಕಿದ್ದಂತೆಯೇ ಖಿನ್ನತೆ, ಬೇಸರ, ಎನರ್ಜಿ ಇಲ್ಲದೇ ಇರುವುದು, ಯಾವ ವಿಷಯದಲ್ಲಿಯೂ ಆಸಕ್ತಿ ಕಾಣದೇ ಹೋಗುವುದಕ್ಕೆ ನೀವು ಮಾನಸಿಕವಾಗಿ ಖಿನ್ನೆತೆಗೆ ಒಳಗಾಗಿದ್ದೀರಿ ಎಂದು ಹೇಳಲು ಆಗುವುದಿಲ್ಲ. ಈ ಸಮಯದಲ್ಲಿ ನಿಮ್ಮ ದೇಹದಲ್ಲಿದ ಬಿ12 ಹಾಗೂ ಡಿ3 ಪರೀಕ್ಷಿಸಿ ನೋಡಿ. ಅದು ಕಡಿಮೆ ಇದ್ದಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸುತ್ತವೆ. ಇದಕ್ಕೆ ವೈದ್ಯಕೀಯ ಚಿಕಿತ್ಸೆ ಪಡೆದಲ್ಲಿ ಕೆಲವೇ ದಿನಗಳಲ್ಲಿ ಖಿನ್ನತೆ ದೂರಾಗುತ್ತದೆ.

ಈ ಲಕ್ಷಣಗಳು ಕಾಣಿಸುತ್ತವೆ..

ರಕ್ತದಲ್ಲಿ ಬಿ12 ಅಂಶ ಕಡಿಮೆ ಇದ್ದಲ್ಲಿ ನಿಮಗೆ ತೀವ್ರ ಆಯಾಸ ಆಗುತ್ತದೆ. ದೇಹದಲ್ಲಿ ಒಂದಿಷ್ಟು ಶಕ್ತಿಯೂ ಉಳಿದಿಲ್ಲವೇನೋ ಎನ್ನುವಂತೆ ಭಾಸವಾಗುತ್ತದೆ. ಮನೆಯಲ್ಲಿ ಒಂದು ಕೆಲಸ ಮಾಡದೇ ಇದ್ದರೂ ಸುಸ್ತು ಎನಿಸುತ್ತದೆ.

ಕೈ ಹಾಗೂ ಕಾಲುಗಳು ಮರಗಟ್ಟಿದಂತೆ ಭಾಸವಾಗುತ್ತದೆ. ಕೂತ ಕಡೆ ಕೆಲ ಸಮಯ ಕೂರಲೂ ಸಾಧ್ಯವಾಗುವುದಿಲ್ಲ. ಕೆಲವರಿಗೆ ಕೈ ಹಾಗೂ ಕಾಲುಗಳಲ್ಲಿ ಸೂಜಿ ಚುಚ್ಚಿದಂತಹ ಅನುಭವವಾಗುತ್ತದೆ.

ನೆನಪಿನ ಶಕ್ತಿಯಲ್ಲಿ ಭಾರೀ ಬದಲಾವಣೆ ಕಾಣುತ್ತೀರಿ. ಒಲೆ ಮೇಲೆ ಹಾಲಿಟ್ಟ ಪ್ರತೀ ಬಾರಿಯೂ ಮರೆಯುವುದು, ಮುಖ್ಯವಾದ ಡಾಕ್ಯುಮೆಂಟ್ಸ್‌ ಇಟ್ಟು ಮರೆಯುವುದು, ಮಕ್ಕಳ ಬಾಕ್ಸ್‌ಗೆ ಊಟ ತುಂಬಿಸಿ ಬ್ಯಾಗ್‌ ಕೊಡೋದನ್ನೇ ಮರೆತುಬಿಡಬಹುದು. ಕೆಲವೊಮ್ಮೆ ನೂರಾರು ಗೊಂದಲ ನಿಮ್ಮನ್ನು ಆವರಿಸಿಕೊಳ್ಳುತ್ತದೆ.

ನಿಮ್ಮ ಚರ್ಮದ ಬಣ್ಣ ಯಾವುದೇ ಇರಲಿ. ಸ್ಕಿನ್‌ ಬಿಳುಚಿಕೊಂಡಂತೆ ಅಥವಾ ಹಳದಿ ಬಣ್ಣಕ್ಕೆ ತಿರುಗಿದಂತೆ ಕಾಣಿಸುತ್ತದೆ. ಮುಖದಲ್ಲಿ ಹೊಳಪು ಇರೋದಿಲ್ಲ.

ನಾಲಗೆಯಲ್ಲಿ ಪದೇ ಪದೆ ಹುಣ್ಣುಗಳಾಗುತ್ತವೆ. ದೇಹದ ಎಲ್ಲ ಭಾಗಗಳಲ್ಲಿಯೂ ಕೀವು ತುಂಬಿದ ಮೊಡವೆಗಳಾಗುತ್ತವೆ. ನಾಲಗೆಯ ಮೇಲಿನ ಹುಣ್ಣುಗಳು ನೋವುಯುಕ್ತವಾಗಿದ್ದು, ಊಟ ತಿಂಡಿ ಮಾಡುವುದು ಕಷ್ಟವಾಗುತ್ತದೆ.

ಸದಾ ಖುಷಿಯಾಗಿ ಓಡಾಡುಕೊಂಡಿರುವ ನೀವು ಇದ್ದಕ್ಕಿದ್ದಂತೆಯೇ ಮೌನಕ್ಕೆ ಶರಣಾಗುತ್ತೀರಿ. ಯಾರ ಜೊತೆಯೂ ಮುಂಚಿನಷ್ಟು ಉತ್ಸಾಹದಿಂದ ಮಾತನಾಡಲು ಆಗುವುದಿಲ್ಲ. ಖಿನ್ನತೆ ಹಾಗೂ ಮೂಡ್‌ನಲ್ಲಿ ಬದಲಾವಣೆ ಆಗುತ್ತದೆ.

ಯಾವೆಲ್ಲ ಪದಾರ್ಥಗಳನ್ನು ಸೇವಿಸಬೇಕು?

ಮೊಟ್ಟೆ, ಮೀನು, ಚಿಕನ್‌, ಮಟನ್‌, ಕಪ್ಪೆಚಿಪ್ಪು, ಪ್ರಾನ್ಸ್‌, ಹಾಲು, ಮೊಸರು, ಗಿಣ್ಣ, ಚೀಸ್‌,ಮಜ್ಜಿಗೆ, ಕಾಳು ಬೇಳೆಗಳು, ಸನ್‌ಡ್ರೈಡ್‌ ಮಶ್ರೂಮ್ಸ್‌, ಇಡ್ಲಿ, ದೋಸೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !