March 4, 2026
Wednesday, March 4, 2026
spot_img

ಇರಾನ್‌ ವಿರುದ್ಧ ದಾಳಿಗೆ ವಾಯುನೆಲೆ ಬಳಕೆಗೆ ಸ್ಪೇನ್‌ ನಿರಾಕರಣೆ: ವ್ಯಾಪಾರ ಒಪ್ಪಂದವನ್ನೇ ರದ್ದುಗೊಳಿಸಿದ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಪೇನ್‌ ಜೊತೆಗಿನ ವ್ಯಾಪಾರ ಒಪ್ಪಂದ ರದ್ದುಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರೊಂದಿಗಿನ ಓವಲ್ ಆಫೀಸ್ ಸಭೆಯಲ್ಲಿ ಮಾತನಾಡಿದ ಟ್ರಂಪ್, ಇರಾನ್‌ ಮೇಲಿನ ದಾಳಿಗೆ ಸ್ಪ್ಯಾನಿಷ್‌ ಮಿಲಿಟರಿ ನೆಲೆಗಳ ಬಳಕೆಗೆ ಸ್ಪೇನ್‌ ನಿರಾಕರಿಸಿದೆ. ಹೀಗಾಗಿ, ಅಮೆರಿಕ ವ್ಯಾಪಾರ ಒಪ್ಪಂದ ರದ್ದುಗೊಳಿಸುವುದಾಗಿ ಎಂದು ಹೇಳಿದ್ದಾರೆ.

ಇತ್ತ ಅಮೆರಿಕದ ನಿರ್ಧಾರಕ್ಕೆ ಸ್ಪೇನ್‌ನ ಉಪಪ್ರಧಾನ ಮಂತ್ರಿ ಮಾರಿಯಾ ಜೀಸಸ್ ಮಾಂಟೆರೊ ಪ್ರತಿಕ್ರಿಯೆ ನೀಡಿದ್ದು, ನಮ್ಮ ದೇಶವು ಅಮೆರಿಕದ ಸಾಮಂತ ದೊರೆಯಾಗುವುದಿಲ್ಲ. ನಾವು ಯಾವುದೇ ಬೆದರಿಕೆಗಳನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಗಳನ್ನು ಸ್ಪೇನ್ ಖಂಡಿಸಿದೆ. ಈ ಘೋಷಣೆಯು ಅಮೆರಿಕ-ಸ್ಪೇನ್ ಸಂಬಂಧಗಳಲ್ಲಿ ಬಿರುಕು ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !