March 5, 2026
Thursday, March 5, 2026
spot_img

ಪೈಲ್ಸ್‌ ಆಪರೇಷನ್‌ ಆಗಿದೆ ಅಂದಿದ್ದಕ್ಕೆ ಪ್ರೂಫ್‌ ತೋರಿಸು ಎಂದ ಹಿರಿಯ ಅಧಿಕಾರಿ! ಕಚೇರಿಯಲ್ಲೇ ಪ್ಯಾಂಟ್‌ ತೆಗೆದ ಸಿಬ್ಬಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪೈಲ್ಸ್‌ ಆಪರೇಷನ್‌ ಆಗಿದೆ ಅಂದಿದ್ದಕ್ಕೆ ಪ್ರೂಫ್‌ ತೋರಿಸು ಎಂದು ಹಿರಿಯ ಅಧಿಕಾರಿ ಕೇಳಿದ್ದು, ಸಿಬ್ಬಂದಿ ಕಚೇರಿಯಲ್ಲಿಯೇ ಪ್ಯಾಂಟ್‌ ಬಿಚ್ಚಿ ತೋರಿಸಿದ ಘಟನೆ ಲಕ್ನೋದಲ್ಲಿ ನಡೆದಿದೆ.

ಲೋಕೋ ಪೈಲಟ್‌ ರಾಜೇಶ್‌ ಮೀನಾ ಪೈಲ್ಸ್‌ ಆಪರೇಷನ್‌ ಮಾಡಿಸಿಕೊಂಡಿದ್ದು, ಕೂರಲು ಆಗೋದಿಲ್ಲ ರಜೆ ಕೊಡಿ ಎಂದು ಹಿರಿಯ ಅಧಿಕಾರಿ ಬಳಿ ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪದ ಹಿರಿಯ ಅಧಿಕಾರಿ ಪ್ರೂಫ್‌ ಏನಿದೆ ಎಂದು ಪ್ರಶ್ನಿಸಿದ್ದಾರೆ.

ನಾಲ್ಕು ದಿನದ ರಜೆ ಕೊಟ್ಟಾಗಿ ಮತ್ತೆ ಕೇಳಬೇಡಿ ಎಂದು ಹೇಳಿದ್ದಾರೆ. ಗಾಯ ವಾಸಿಯಾಗಿಲ್ಲ ಇನ್ನಷ್ಟು ದಿನ ರಜೆ ವಿಸ್ತರಣೆ ಮಾಡಿ ಎಂದು ರಾಜೇಶ್‌ ಮನವಿ ಮಾಡಿದ್ದಾರೆ. ಆಗ ಹಿರಿಯ ಅಧಿಕಾರಿ ಗಾಯ ವಾಸಿಯಾಗಿದೆಯೋ ಇಲ್ಲವೋ ಪ್ರೂಫ್‌ ಕೊಡು ಆಮೇಲೆ ನೋಡೋಣ ಎಂದಿದ್ದಾರೆ.

ಇದರಿಂದ ಸಿಟ್ಟಿಗೆದ್ದ ರಾಜೇಶ್‌ ಮೀನಾ ಪ್ಯಾಂಟ್‌ ಬಿಚ್ಚಿ ಆಪರೇಷನ್‌ ಆದ ಜಾಗವನ್ನು ತೋರಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಹಿರಿಯ ಅಧಿಕಾರಿಯ ಕೆಟ್ಟ ನಡವಳಿಕೆ ಕಂಡು ಜನ ಅಸಹ್ಯ ಪಟ್ಟಿದ್ದಾರೆ.

ರೈಲ್ವೆಯ ಆರೋಗ್ಯ ಘಟಕಕ್ಕೆ ಭೇಟಿ ನೀಡಿದ ರಾಜೇಶ್‌ ಮೀನಾ ವೈದ್ಯರಿಗೆ ತಮ್ಮ ಗಾಯವನ್ನು ತೋರಿಸಿದ್ದಾರೆ. ವೈದ್ಯರು ಚೇತರಿಕೆಗೆ ಇನ್ನೂ ಕೆಲವು ದಿನ ಬೇಕು ಎಂದು ದೃಢಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !