ಹೊಸದಿಗಂತ ವರದಿ ಬೀದರ್:
ಬಸವಕಲ್ಯಾಣದ ಯಾತ್ರಿ ನಿವಾಸದ ಬಳಿ ಮಂಗಳವಾರ ಸಂಜೆ ವಾಕಿಂಗ್‌ಗೆ ತೆರಳಿದ್ದ ಇಬ್ಬರು ಮುಸ್ಲಿಂ ಯುವಕರ ಮೇಲೆ ಆರೇಳು ಜನ ಅಪರಿಚಿತರಿಂದ ಹಲ್ಲೆ ಆರೋಪ ಕೇಳಿಬಂದಿದ್ದು, ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಖಾಸಗಿ ಶಾಲೆಯ ಶಿಕ್ಷಕರಾದ ಸೈಯದ್ ಇಮ್ರಾನ್, ಮಹಮ್ಮದ್ ಆರೀಫ್ ಎಂಬುವವರ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ.
ಕೊಲೆ ಮಾಡುವ ಉದ್ದೇಶದಿಂದ ನನ್ನ ತಲೆಯ ಮೇಲೆ ಕಲ್ಲು ಎತ್ತಿ ಹಾಕಲು ಮುಂದಾಗಿದ್ದರು. ಈ ವೇಳೆ ನಾನು ಪಕ್ಕಕ್ಕೆ ಸರಿದಿದ್ದರಿಂದ ಕಲ್ಲು ನನ್ನ ಪಕ್ಕದಲ್ಲಿ ಬಿದ್ದಿದೆ. ಆ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ಸೈಯದ್ ಇಮ್ರಾನ್ ಆರೋಪಿಸಿದ್ದರು.
ಇದನ್ನೂ ಓದಿ:
ಇನ್ನು, ಇದೇ ಘಟನೆಗೆ ಸಂಬಂಧಪಟ್ಟಂತೆ ಯುವಕರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ವಶಕ್ಕೆ ಕೊಡುವಂತೆ ಒತ್ತಾಯಿಸಿ ಪೊಲೀಸ್ ಠಾಣೆ ಮುಂದೆ ಮುಸ್ಲಿಂ ಸಮುದಾಯದವರು ಜಮಾಯಿಸಿ ಹೈಡ್ರಾಮಾ ನಡೆಸಿದ್ದಾರೆ.
ಪೊಲೀಸರ ಮೇಲೆಯೇ ಕಲ್ಲು ತೂರಾಟ ಆರೋಪ: ಈ ವೇಳೆ ಪೊಲೀಸರು ಠಾಣೆಯಿಂದ ಹೋಗುವಂತೆ ಎಷ್ಟೇ ಸೂಚಿಸಿದರೂ ಕದಲದ ಕಾರಣ ಜಮಾವಣೆಗೊಂಡ ಜನರನ್ನ ಚದುರಿಸಲು ಪೊಲೀಸರು ಲಘು ಲಾಠಿಚಾರ್ಜ್ ನಡೆಸಿದ್ದಾರೆ ಎನ್ನಲಾಗಿದೆ.



