March 7, 2026
Saturday, March 7, 2026
spot_img

ಭಾರತದಲ್ಲಿ ಇಂಧನ ಕೊರತೆಯಿಲ್ಲ: ದೇಶವಾಸಿಗಳಿಗೆ ಕೇಂದ್ರ ಸಚಿವರ ಭರವಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಇಂಧನ ಕೊರತೆಯಿಲ್ಲ ಮತ್ತು ನಮ್ಮ ಗ್ರಾಹಕರು ಈ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಪುರಿ ಶುಕ್ರವಾರ ಹೇಳಿದ್ದಾರೆ.

ನಮ್ಮ ನಾಗರಿಕರಿಗೆ ಕೈಗೆಟುಕುವ ಮತ್ತು ಸುಸ್ಥಿರ ಇಂಧನದ ಲಭ್ಯತೆ ಖಚಿತಪಡಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿದೆ. ಮತ್ತು ನಾವು ಅದನ್ನು ಯಾವುದೇ ಒತ್ತಡಗಳ್ಳಿಲ್ಲದೆ ಎಂದಿನಂತೆ ಸಹಜವಾಗಿ ಮಾಡಿ ಮುಗಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇಂಡಿಯನ್ ಆಯಿಲ್ ಕೂಡ ಈ ಕುರಿತು ಭರವಸೆ ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿನ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ವರದಿಗಳನ್ನು ತಳ್ಳಿಹಾಕಿದ ಅವರು, ಭಾರತದಲ್ಲಿ ಸಾಕಷ್ಟು ಇಂಧನ ಸಂಗ್ರಹವಿದೆ. ಪೂರೈಕೆ ಮತ್ತು ವಿತರಣಾ ಜಾಲಗಳು ಎಂದಿನಂತೆ ನಿರಾಂತಕವಾಗಿ ಕಾರ್ಯನಿರ್ವಹಿಸುತ್ತಿವೆ. ದೇಶಾದ್ಯಂತ ನಿರಂತರ ಇಂಧನ ಪೂರೈಕೆಯನ್ನು ನಿರ್ವಹಿಸಲು ಇಂಡಿಯನ್ ಆಯಿಲ್ ಬದ್ಧವಾಗಿದೆ. ನಾಗರಿಕರು ಇಂಧನ ಕೇಂದ್ರಗಳಲ್ಲಿ ಭಯಭೀತರಾಗಬಾರದು ಅಥವಾ ಜನಸಂದಣಿಯನ್ನು ತೋರಿಸಬಾರದು ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಬೇಕು ಎಂದು ಜನರಲ್ಲಿ ವಿನಂತಿ ಮಾಡಲಾಗಿದೆ ಎಂದು X ಪೋಸ್ಟ್ ಮಾಡಿದೆ.

ಮೂಲಗಳ ಪ್ರಕಾರ ದೇಶವು ಪ್ರಸ್ತುತ ಹಾರ್ಮುಜ್ ಜಲಸಂಧಿಯ ಮೂಲಕ ಪರಿಣಾಮ ಬೀರಬಹುದಾದ ಪ್ರಮಾಣಕ್ಕಿಂತ, ಇನ್ನಿತರ ಮೂಲಗಳಿಂದ ಹೆಚ್ಚಿನ ಇಂಧನ ಸರಬರಾಜುಗಳಿಗೆ ವ್ಯವಸ್ಥೆ ಮಾಡಿಕೊಂಡಿದೆ. ಭಾರತದ ಅಸ್ತಿತ್ವದಲ್ಲಿರುವ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ದೇಶೀಯ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !