March 7, 2026
Saturday, March 7, 2026
spot_img

ಬೆಳಿತಿದೆ ಆಸ್ತಿ ಪಟ್ಟಿ : 31.5 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ ಖರೀದಿಸಿದ ನಯನತಾರಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ಅವರ ಪತಿ, ನಿರ್ದೇಶಕ ವಿಘ್ನೇಶ್ ಶಿವನ್ ಚೆನ್ನೈನ ಪ್ರತಿಷ್ಠಿತ ಪೋಯಸ್ ಗಾರ್ಡನ್ ಪ್ರದೇಶದಲ್ಲಿ ಐಷಾರಾಮಿ ಡ್ಯುಪ್ಲೆಕ್ಸ್ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಈ ಆಸ್ತಿಯ ಮೌಲ್ಯ ಸುಮಾರು 31.5 ಕೋಟಿ ರೂಪಾಯಿ ಎಂದು ವರದಿಯಾಗಿದೆ.

ಪ್ರಾಪರ್ಟಿ ಅನಾಲಿಟಿಕ್ಸ್ ವೇದಿಕೆ ಜ್ಯಾಪ್‌ಕೀ ನೀಡಿರುವ ಮಾಹಿತಿಯ ಪ್ರಕಾರ, ಈ ಮನೆ ಚೆನ್ನೈನ ತೇನಾಂಪೇಟೆ ವ್ಯಾಪ್ತಿಯ ‘ಲೆಗಸಿ’ ಎಂಬ ಪ್ರೀಮಿಯಂ ವಸತಿ ಸಂಕೀರ್ಣದಲ್ಲಿ ಇದೆ. ಕಟ್ಟಡದ ನಾಲ್ಕನೇ ಮತ್ತು ಐದನೇ ಮಹಡಿಯಲ್ಲಿ ಇರುವ ಈ ಡ್ಯುಪ್ಲೆಕ್ಸ್ ಅಪಾರ್ಟ್‌ಮೆಂಟ್ ಸುಮಾರು 14,369 ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಆಸ್ತಿಯಲ್ಲಿ ನಯನತಾರಾ ಅವರಿಗೆ ಶೇಕಡ 90ರಷ್ಟು ಪಾಲಿದ್ದರೆ, ವಿಘ್ನೇಶ್ ಶಿವನ್ ಅವರಿಗೆ ಶೇಕಡ 10ರಷ್ಟು ಪಾಲಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಈ ಆಸ್ತಿಯ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ.

ಇದನ್ನೂ ಓದಿ:

ಇದರಿಂದ ನಯನತಾರಾ ಅವರ ಆಸ್ತಿ ಪಟ್ಟಿಗೆ ಮತ್ತೊಂದು ಐಷಾರಾಮಿ ಮನೆ ಸೇರ್ಪಡೆಯಾಗಿದೆ. ಅವರು ಈಗಾಗಲೇ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ತಲಾ 15 ಕೋಟಿ ರೂಪಾಯಿ ಮೌಲ್ಯದ ಎರಡು ಮನೆಗಳನ್ನು ಹೊಂದಿದ್ದಾರೆ. ಜೊತೆಗೆ ಕೇರಳದಲ್ಲಿರುವ ಅವರ ಪೂರ್ವಜರ ಮನೆಯನ್ನು ಸಹ ಐಷಾರಾಮಿ ನಿವಾಸಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !