June 26, 2026
Friday, June 26, 2026
spot_img

ಫಸ್ಟ್‌ ಟೈಮ್‌ ಜೀವ ಉಳಿಸಿದ ʼರೋಡ್‌ ಹಂಪ್‌ʼ, ಆಂಬುಲೆನ್ಸ್‌ನಲ್ಲೇ ಎದ್ದು ಕುಳಿತ ವೃಧ್ಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಸ್ತೆಯ ಹಂಪ್‌ನಿಂದ ಜೀವ ಹೋದ ಸುದ್ದಿಗಳನ್ನು ಕೇಳಿಯೇ ಇರ್ತೀರಿ ಆದರೆ ರೋಡ್‌ ಹಂಪ್‌ನಿಂದ ಜೀವ ಉಳಿದ ಸುದ್ದಿ ಕೇಳಿದ್ದೀರಾ? ಇದನ್ನು ಸಂಪೂರ್ಣವಾಗಿ ಓದಿ..

ಬಾಗಲಕೋಟೆಯ ಜಮಖಂಡಿಯಲ್ಲಿ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದಾಗ ಮಾರ್ಗಮಧ್ಯದಲ್ಲಿ ವಾಹದ ದೊಡ್ಡ ಹಂಪ್ಸ್‌ನ್ನು ದಾಟಿದೆ. ಇಡೀ ವಾಹನ ಜೋರಾಗಿ ಅಲುಗಾಡಿದೆ, ಈ ರಭಸಕ್ಕೆ ಮೃತಪಟ್ಟಿದ್ದಾರೆ ಎಂದು ತಿಳಿದುಕೊಂಡಿದ್ದ ವ್ಯಕ್ತಿ ಎದ್ದು ಕುಳಿತಿದ್ದಾರೆ, ನಾನೆಲ್ಲಿಗೆ ಹೋಗ್ತಿದ್ದೀನಿ ಎಂದು ಮಾತನಾಡಿದ್ದಾರೆ.

ಜಮಖಂಡಿ ನಗರದ ಮೊಮಿನ್ ಗಲ್ಲಿಯ ನಿವಾಸಿ ಮುಬಾರಕ್ ಆವಟಿ (65) ಎಂಬವರೇ ಮರಳಿ ಜೀವ ಪಡೆದು ಬಂದ ವ್ಯಕ್ತಿ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಇವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮುಬಾರಕ್ ಅವರು ಮೃತಪಟ್ಟಿರುವುದಾಗಿ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದರು.

ಕುಟುಂಬದವರು ಅಂತ್ಯಸಂಸ್ಕಾರದ ಸಿದ್ಧತೆ ಮಾಡಿಕೊಂಡಿದ್ದರು. ಆಂಬುಲೆನ್ಸ್‌ನಲ್ಲಿ ಮೃತದೇಹ ಹುಟ್ಟೂರಿಗೆ ಬರುತ್ತಿತ್ತು. ಈ ವೇಳೆ ಹಂಪ್ಸ್‌ಗೆ ಹಾರಿ ಮುಬಾರಕ್‌ ಎದ್ದು ಕುಳಿತಿದ್ದಾರೆ. ಕುಟುಂಬದವರು ಶಾಕ್‌ ಹಾಗೇ ಖುಷಿ ಪಟ್ಟಿದ್ದು, ಸೀದ ಆಸ್ಪತ್ರೆಗೆ ಗಾಡಿ ಓಡಿಸಿದ್ದಾರೆ. ಸಾವನ್ನು ಗೆದ್ದು ಬಂದ ಅಜ್ಜ ಎಂದೇ ಮುಬಾರಕ್‌ರನ್ನು ಜನ ಕರೆಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !