September 21, 2026
Monday, September 21, 2026
spot_img

ಅಂಬಾನಿ ಫ್ಯಾಮಿಲಿ ಫಂಕ್ಷನ್‌ನಲ್ಲಿ ನೀತಾ-ಮುಕೇಶ್ ಟ್ವಿನ್ನಿಂಗ್: ರಾಯಲ್ ಲುಕ್‌ಗೆ ಫ್ಯಾನ್ಸ್ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೋಷಿಯಲ್ ಮೀಡಿಯಾ ಅಂದ್ಮೇಲೆ ದಿನಕ್ಕೊಂದು ವೈರಲ್ ವಿಷಯ ಬರ್ತಾನೇ ಇರುತ್ತೆ, ಆದ್ರೆ ಅಂಬಾನಿ ಫ್ಯಾಮಿಲಿಯ ಗ್ರ್ಯಾಂಡ್‌ನೆಸ್‌ಗೆ ಇರೋ ಕ್ರೇಜೇ ಬೇರೆ. ಈಗ ನೀತಾ ಅಂಬಾನಿ ಮತ್ತು ಮುಕೇಶ್ ಅಂಬಾನಿ ಅವರ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್‌ನಲ್ಲಿವೆ. ಇತ್ತೀಚೆಗೆ ನಡೆದ ಒಂದು ಫ್ಯಾಮಿಲಿ ಸೆಲೆಬ್ರೇಷನ್‌ನಲ್ಲಿ ಈ ಪವರ್ ಕಪಲ್ ಟ್ವಿನ್ನಿಂಗ್ ರಾಯಲ್ ಟ್ರೆಡಿಷನಲ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ.

ಗಣೇಶ ಚತುರ್ಥಿ ಹಬ್ಬದಲ್ಲಿ ನೀತಾ ಅಂಬಾನಿ ಅವರು ಮೈತುಂಬಾ ರಾಯಲ್ ಗ್ರೀನ್ ಕಲರ್ ಸೀರೆ ಉಟ್ಟು, ಕೊರಳಲ್ಲಿ ದಪ್ಪಗಿನ ಡೈಮಂಡ್ ನೆಕ್ಲೇಸ್ ಹಾಕೊಂಡು ಇಂಟರ್‌ನೆಟ್‌ ಫುಲ್ ವೈರಲ್ ಆಗಿತ್ತು. ಈಗ ಅದಾದ ಬೆನ್ನಲ್ಲೇ ಗ್ರ್ಯಾಂಡ್ ಬೇಜ್ ಮತ್ತು ಗೋಲ್ಡ್ ಮಿಕ್ಸ್ ಇರೋ ರೇಷ್ಮೆ ಸೀರೆಯನ್ನು ಸೆಲೆಕ್ಟ್ ಮಾಡಿಕೊಂಡು ಎಲ್ಲರ ಕಣ್ಣು ಕೋರೈಸುವಂತೆ ಮಾಡಿದ್ದಾರೆ.

ಈ ಸೀರೆಯನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು. ಬೇಜ್ ಬ್ಯಾಕ್‌ಗ್ರೌಂಡ್‌ನಲ್ಲಿ ಇಡೀ ಸೀರೆಗೆ ರೇಷ್ಮೆ ದಾರ ಮತ್ತು ಚಿನ್ನದ ದಾರದ ಸೂಕ್ಷ್ಮ ಎಂಬ್ರಾಯ್ಡರಿ ವರ್ಕ್ ಮಾಡಲಾಗಿದೆ. ಬ್ರಾಡ್ ಬಾರ್ಡರ್‌ಗೆ ಡಿಸೈನರ್ ಲೇಸ್ ಮತ್ತು ಕೈಯಲ್ಲಿ ಹೆಣೆದ ಹೂವಿನ ಆಕೃತಿಯ ಡಿಸೈನ್ ಇಡೀ ಸೀರೆಗೆ ರಾಯಲ್ ಟಚ್ ಕೊಟ್ಟಿದೆ.

ಸೀರೆಗೆ ಮ್ಯಾಚ್ ಆಗೋ ತರಹ ಬ್ಲೌಸ್ ಕೂಡ ಫುಲ್ ಹೈಫೈ ಆಗಿತ್ತು. ಟ್ರಾನ್ಸ್‌ಪರೆಂಟ್ ನೆಟ್ ಬೇಸ್ ಮೇಲೆ ಚಿನ್ನದ ಜಾಲರಿ ವರ್ಕ್ ಮಾಡಿಸಲಾಗಿತ್ತು. ಸ್ಕೂಪ್ ನೆಕ್‌ಲೈನ್, ಹಾಫ್ ಶಾರ್ಟ್ ಸ್ಲೀವ್ಸ್ ಮತ್ತು ಪರ್ಫೆಕ್ಟ್ ಫಿಟ್ಟಿಂಗ್‌ ಜೊತೆ ನೀತಾ ಅಂಬಾನಿ ಮಹಾರಾಣಿಯಂತೆ ಕಾಣಿಸುತ್ತಿದ್ದರು.

ಸೀರೆ ಏನೇ ಇರಲಿ, ನೀತಾ ಅಂಬಾನಿ ಅವರ ಆಭರಣಗಳೇ ಯಾವತ್ತಿದ್ದರೂ ಈವೆಂಟ್‌ನ ಮೇನ್ ಹೈಲೈಟ್. ಈ ಬಾರಿಯೂ ಅವರ ಪರ್ಸನಲ್ ಕಲೆಕ್ಷನ್‌ನಲ್ಲಿದ್ದ ಬೆಲೆಬಾಳುವ ವಜ್ರಗಳಿಂದ ಮಾಡಿದ ರಾಯಲ್ ನೆಕ್ಲೇಸ್ ಹಾಕೊಂಡಿದ್ದರು. ದೊಡ್ಡ ದೊಡ್ಡ ಡೈಮಂಡ್ ಇರುವ ಇಯರಿಂಗ್ಸ್, ಕೈಗೆ ವಜ್ರದ ಬಳೆ ಮತ್ತು ರಾಕ್ ಸೈಜ್ ಡೈಮಂಡ್ ರಿಂಗ್ ಧರಿಸಿದ್ದರು. ಜೊತೆಗೆ ಕೈಯಲ್ಲಿದ್ದ ಎಂಬ್ರಾಯ್ಡರಿ ಮಾಡಿದ ಕ್ಯೂಟ್ ಮಿನಿ ಹ್ಯಾಂಡ್‌ಬ್ಯಾಗ್ ಅವರ ಕಂಪ್ಲೀಟ್ ಲುಕ್‌ಗೆ ಫುಲ್ ಮಾರ್ಕ್ಸ್ ಕೊಡುವಂತಿತ್ತು.

ಒಟ್ಟಿನಲ್ಲಿ ನೀತಾ ಅಂಬಾನಿ ಮತ್ತೊಮ್ಮೆ ತಮ್ಮ ಸಿಂಪಲ್ ಬಟ್ ರಾಯಲ್ ಫ್ಯಾಷನ್ ಸೆನ್ಸ್ ಹಾಗೂ ಅದ್ದೂರಿತನದಿಂದ ಇಡೀ ದೇಶದ ಗಮನ ಸೆಳೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !