October 18, 2026
Sunday, October 18, 2026
spot_img

ಸಲ್ಲು ಭಾಯ್ ಒಂದೇ ಏಟಿಗೆ ಪಾಕ್ RJ ಶಾಕ್: ಕತ್ರಿನಾ ಬಾಡಿ ಶೇಮಿಂಗ್ ಮಾಡಿದ್ದಕ್ಕೆ ಬಹಿರಂಗ ಕ್ಷಮೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬಾಸ್ 20 ‘ವೀಕೆಂಡ್ ಕಾ ವಾರ್’ ಎಪಿಸೋಡ್‌ನಲ್ಲಿ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅವರ ರೌದ್ರಾವತಾರ ಕಂಡು ಪ್ರೇಕ್ಷಕರು ಶಾಕ್ ಆಗಿದ್ದಾರೆ. ಗರ್ಭಿಣಿಯಾದ ನಂತರ ತೂಕ ಹೆಚ್ಚಿಸಿಕೊಂಡ ಕಾರಣಕ್ಕೆ ಕತ್ರಿನಾ ಕೈಫ್ ಅವರನ್ನು ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದವರಿಗೆ ಸಲ್ಮಾನ್ ಖಾನ್ ಲೈವ್‌ನಲ್ಲೇ ಸರಿಯಾಗಿ ಬೆಂಡೆತ್ತಿದ್ದಾರೆ. ಸಲ್ಮಾನ್ ಅವರ ಈ ಗರಂ ಅವತಾರ ನೋಡಿದ ಮೇಲೆ, ಕತ್ರಿನಾರನ್ನು ಬಾಡಿ ಶೇಮಿಂಗ್ ಮಾಡಿದ್ದ ಪಾಕಿಸ್ತಾನಿ ಆರ್‌ಜೆ ಒಬ್ಬರು ಈಗ ಭಯ ಬಿದ್ದು ಸೋಷಿಯಲ್ ಮೀಡಿಯಾದಲ್ಲಿ ಕೈಮುಗಿದು ಕ್ಷಮೆ ಕೇಳಿದ್ದಾರೆ.

ಅಂಬಾನಿ ಮನೆಯ ಗಣೇಶ ಚತುರ್ಥಿ ಸಂಭ್ರಮದಲ್ಲಿ ಕತ್ರಿನಾ ಕೈಫ್ ಕಾಣಿಸಿಕೊಂಡಾಗ, ಅವರ ತೂಕದ ಬಗ್ಗೆ ಪಾಕಿಸ್ತಾನದ ಆರ್‌ಜೆ ಡಾ. ಇಜಾಜ್ ವಾರಿಸ್ ಎಂಬುವವರು ತುಂಬಾ ಕೆಟ್ಟದಾಗಿ ಕಾಮೆಂಟ್ ಮಾಡಿ ವೀಡಿಯೋ ಮಾಡಿದ್ದರು. ಬಿಗ್ ಬಾಸ್ ಶೋನಲ್ಲಿ ಸಲ್ಮಾನ್ ಖಾನ್ ಈ ವಿಚಾರ ಎತ್ತಿ ಟ್ರೋಲರ್‌ಗಳಿಗೆ ಖಡಕ್ ವಾರ್ನಿಂಗ್ ಕೊಡುತ್ತಿದ್ದಂತೆಯೇ, ಬೆದರಿದ ಆರ್‌ಜೆ ಇಜಾಜ್ ತಕ್ಷಣವೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಾಪಣೆ ವೀಡಿಯೋ ಪೋಸ್ಟ್ ಮಾಡಿದ್ದಾರೆ.

“ಕತ್ರಿನಾ ಕೈಫ್ ಅವರೇ, ನನ್ನ ಮಾತುಗಳಿಂದ ನಿಮಗೆ ಮತ್ತು ನಿಮ್ಮ ಅಭಿಮಾನಿಗಳಿಗೆ ಬೇಸರವಾಗಿದ್ದರೆ ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ಬಿಗ್ ಬಾಸ್‌ನಲ್ಲಿ ಸಲ್ಮಾನ್ ಖಾನ್ ಈ ವಿಷಯ ಮಾತನಾಡಿದ ಮೇಲೆ ನನಗೆ ನನ್ನ ತಪ್ಪಿನ ಅರಿವಾಯ್ತು. ಸಲ್ಮಾನ್ ಖಾನ್ ಮತ್ತು ಅವರ ಅಭಿಮಾನಿಗಳ ಬಳಿಯೂ ಕ್ಷಮೆ ಯಾಚಿಸುತ್ತೇನೆ. ವೀಡಿಯೋ ವೈರಲ್ ಮಾಡೋ ಜೋಷ್‌ನಲ್ಲಿ ಹರಿತವಾಗಿ ಮಾತನಾಡಿಬಿಟ್ಟೆ, ಆದರೆ ಯಾರನ್ನೂ ಬಾಡಿ ಶೇಮಿಂಗ್ ಮಾಡೋ ಉದ್ದೇಶ ನನಗಿರಲಿಲ್ಲ” ಎಂದು ಆ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.

https://www.instagram.com/reel/DdhRDn8Di6J/?utm_source=ig_web_button_share_sheet

ಅಷ್ಟೇ ಅಲ್ಲದೆ, “ಪ್ರಪಂಚದಾದ್ಯಂತ ಜನ ನನ್ನನ್ನು ಬೈಯುತ್ತಿದ್ದರೆ ಮನಸ್ಸಿಗೆ ತುಂಬಾ ಭಾರವೆನಿಸುತ್ತಿತ್ತು. ಸಲ್ಮಾನ್ ಖಾನ್ ಹೇಳಿದ ಮೇಲೆ ನನಗೆ ನಿಜವಾಗಿಯೂ ತಪ್ಪಿನ ಅರಿವಾಯ್ತು. ಕತ್ರಿನಾ ಭಾರತದ ಸೂಪರ್ ಸ್ಟಾರ್, ಅವರು ಯಾವಾಗಲೂ ಹೀಗೆಯೇ ಮಿಂಚಲಿ” ಎಂದು ಹೊಗಳಿ, ಕಮೆಂಟ್ಸ್ ಬಾಕ್ಸ್ ಅನ್ನೇ ಆಫ್ ಮಾಡಿದ್ದಾರೆ.

ಇನ್ನು ಈ ಆರ್‌ಜೆ ಕತ್ರಿನಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾಗ ಬರೀ ಭಾರತೀಯರಷ್ಟೇ ಅಲ್ಲ, ಪಾಕಿಸ್ತಾನದ ಸ್ಟಾರ್ ಸಿಂಗರ್ ಅಲಿ ಜಾಫರ್ ಕೂಡ ಆರ್‌ಜೆಗೆ ಕ್ಲಾಸ್ ತಗೊಂಡು ಕತ್ರಿನಾ ಬೆಂಬಲಕ್ಕೆ ನಿಂತಿದ್ದರು. ಒಟ್ಟಿನಲ್ಲಿ ಸಲ್ಮಾನ್ ಖಾನ್ ತಮ್ಮ ಫ್ರೆಂಡ್ ಕತ್ರಿನಾ ಪರವಾಗಿ ನಿಂತು ಕ್ಲಾಸ್ ತಗೊಂಡಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಸಲ್ಮಾನ್ ಅವರ ಮಾಸ್ ಆಟಿಟ್ಯೂಡ್‌ಗೆ ಫುಲ್ ಫಿದಾ ಆಗಿದ್ದಾರೆ.

Must Read