August 28, 2026
Friday, August 28, 2026
spot_img

ಗುಜರಾತ್‌ನಲ್ಲಿ ಶಾಕಿಂಗ್ ಘಟನೆ: ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಸಾಯನಿಕ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಗುಜರಾತ್‌ನ ಸೂರತ್ ನಗರದ ಡೈಯಿಂಗ್ ಮಿಲ್‌ನಲ್ಲಿ ನಡೆದಿದೆ.

ಪಾಂಡೇಸಾರ ಜಿಐಡಿಸಿಯ ನ್ಯೂ ಪ್ಯಾರಾಸ್ ಡೈಯಿಂಗ್ ಮಿಲ್‌ನಲ್ಲಿ ಗುರುವಾರ ತಡರಾತ್ರಿ ಜವಳಿ ಸಂಸ್ಕರಣಾ ಘಟಕದಲ್ಲಿ ನಿಯಮಿತ ಟ್ಯಾಂಕ್ ಸ್ವಚ್ಛಗೊಳಿಸಲು ನಾಲ್ವರು ಕಾರ್ಮಿಕರನ್ನು ಒಬ್ಬರ ನಂತರ ಒಬ್ಬರನ್ನು ಆಳವಾದ ರಾಸಾಯನಿಕ ಸಂಗ್ರಹ ಟ್ಯಾಂಕ್‌ಗೆ ಇಳಿಸಲಾಗಿದೆ. ಆದರೆ ಟ್ಯಾಂಕ್‌ನಲ್ಲಿ ಆಮ್ಲಜನಕದ ಕೊರತೆಯಿಂದ ಮತ್ತು ವಿಷಕಾರಿ ರಾಸಾಯನಿಕ ಹೊಗೆಯಿಂದ ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ನಾಲ್ವರು ಕಾರ್ಮಿಕರನ್ನು ಅಂತಿಮವಾಗಿ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ವೈದ್ಯರು ಅವರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಆದರೆ ಒಬ್ಬ ಕಾರ್ಮಿಕ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ.

ಮೃತರು ಬಿಹಾರದ ರೋಹ್ತಾಸ್ ಜಿಲ್ಲೆಯ ವಲಸೆ ಕಾರ್ಮಿಕರಾಗಿದ್ದು, ಜೀವನೋಪಾಯಕ್ಕಾಗಿ ಗುಜರಾತ್‌ಗೆ ಆಗಮಿಸಿದ್ದರು. ಮೃತರನ್ನು ಅಂಕಿತ್ ಕುಮಾರ್(19), ಸೋನು ಕುಮಾರ್ ಪಾಸ್ವಾನ್ ಮತ್ತು ಸಂದೀಪ್ ಕುಮಾರ್ ಪಾಸ್ವಾನ್(22) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಕಾರ್ಮಿಕ ಅಮರೇಂದ್ರ ಕುಮಾರ್ (23) ಪ್ರಸ್ತುತ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !