October 16, 2026
Friday, October 16, 2026
spot_img

ಇನ್ಮುಂದೆ ಇರಾನ್ ಬೆದರಿಸಲ್ಲ, ಅದೊಂದು ಸೋತ ರಾಷ್ಟ್ರ: ಟೆಹ್ರಾನ್ ಕೆಣಕಿದ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದ ನೆರೆ ದೇಶಗಳು ಸಂಕಷ್ಟಕ್ಕೆ ಒಳಗಾಗಿದ್ದು, ಇಂದು ಇರಾನ್ ಮಧ್ಯಪ್ರಾಚ್ಯ ನೆರೆಹೊರೆಯವರ ಬಳಿ ಕ್ಷಮೆಯಾಚಿಸಿ, ಇನ್ನು ಮುಂದೆ ಅವರ ಮೇಲೆ ಗುಂಡು ಹಾರಿಸುವುದಿಲ್ಲ ಎಂದು ಭರವಸೆ ನೀಡಿದೆ.

ಇದರ ಬೆನ್ನಲ್ಲೇ ಇರಾನ್ ನಡೆಯನ್ನು ಲೇವಡಿ ಮಾಡಿದ ಟ್ರಂಪ್, ಈ ಭರವಸೆ ಬಂದಿರುವುದು ಕೇವಲ ಅಮೆರಿಕ ಮತ್ತು ಇಸ್ರೇಲ್‌ನ ಭೀಕರ ದಾಳಿಗಳಿಂದಾಗಿ ಮಾತ್ರ . ಇರಾನ್ ಇನ್ನು ಮುಂದೆ ಮಧ್ಯಪ್ರಾಚ್ಯದ ಬೆದರಿಸುವ ರಾಷ್ಟ್ರ ಅಲ್ಲ, ಅದೊಂದು ಸೋತ ರಾಷ್ಟ್ರ ಎಂದು ಹೇಳಿದ್ದಾರೆ.

ಇರಾನ್ ಸಂಪೂರ್ಣವಾಗಿ ಕುಸಿಯುವವರೆಗೆ ದಶಕಗಳ ಕಾಲ ಸ್ಥಿತಿ ಇರಲಿದೆ. ಇರಾನ್‌ಗೆ ‘ತುಂಬಾ ಕಠಿಣ’ ಹೊಡೆತ ನೀಡುತ್ತೇವೆ. ಇರಾನ್‌ನ ದುರ್ನಡತೆಯಿಂದಾಗಿ, ಇದುವರೆಗೆ ಗುರಿ ಮಾಡದಿದ್ದ ಪ್ರದೇಶಗಳು ಮತ್ತು ಗುಂಪುಗಳನ್ನು ಈಗ ಸಂಪೂರ್ಣ ವಿನಾಶದ ವ್ಯಾಪ್ತಿಗೆ ತರಲು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

Must Read