March 9, 2026
Monday, March 9, 2026
spot_img

MINDSET | ದಪ್ಪ ಆಗಿದಿನಿ ಯಾವ ಬಟ್ಟೆನೂ ಆಗ್ತಿಲ್ಲ ಅಂತ ಅಳೋ ಬದಲು, ಹೊಸಾದು ತಗೊಳೋದು ಬೆಟರ್‌ ಅಲ್ವಾ?

ಇದು ಒಬ್ಬರು ಇಬ್ಬರದಲ್ಲಾ ನೂರಾರು ಜನರ ಸಮಸ್ಯೆ. ಹುಡುಗಿಯರು ದಪ್ಪ ಆಗೋಕೆ ತಿನ್ನೋದೊಂದೇ ಕಾರಣ ಅಲ್ಲ, ಅವರಲ್ಲಿರೋ ನೂರಾರು ಸಮಸ್ಯೆ ಅವರಿಗಷ್ಟೇ ಗೊತ್ತು. ದಪ್ಪ ಆಗಿದಿನಿ, ಬಟ್ಟೆನೇ ಆಗ್ತಿಲ್ಲ, ಎಲ್ಲೂ ಹೊರಗೆ ಹೋಗೋಕೆ ಇಷ್ಟ ಆಗ್ತಿಲ್ಲ, ಯಾಕಂದ್ರೆ ದಪ್ಪ ಆಗ್ಬಿಟ್ಟಿದಿನಿ, ಫೋಟೊ ತೆಗೀಬೇಡಿ ಯಾಕಂದ್ರೆ ದಪ್ಪ ಆಗಿದ್ದೀನಿ ಅನ್ನೋ ಎಷ್ಟೋ ಹುಡುಗಿಯರನ್ನು ನೋಡಿಯೇ ಇರ್ತೀರಿ. ಆದರೆ ನಮ್ಮ ದೇಹವನ್ನು ನಾವೇ ಪ್ರೀತಿಸಿಲ್ಲ ಅಂದ್ರೆ ಹೇಗೆ? ಹಳೇ ಬಟ್ಟೆ ಆಗ್ತಿಲ್ವಾ? ಈಗಿರುವ ಸೈಝ್‌ಗೆ ತಕ್ಕಂತೆ ಬಟ್ಟೆ ಖರೀದಿ ಮಾಡಿ. ಸಣ್ಣಗಾಗ್ತೀರ ಅನ್ನೋ ಹೋಪ್ಸ್‌ ಇದ್ರೆ ಹಳೇ ಬಟ್ಟೆಗಳನ್ನು ಇಟ್ಟುಕೊಳ್ಳಿ, ಇಲ್ಲವಾದ್ರೆ ಅದನ್ನು ಯಾರಿಗಾದ್ರೂ ಕೊಟ್ಟುಬಿಡಿ. ಸಮಸ್ಯೆ ಇರೋದು ದೇಹದಲ್ಲಿ ಅಲ್ಲ, ನಿಮ್ಮ ಮೈಂಡ್‌ಸೆಟ್‌ನಲ್ಲಿ ಅನ್ನೋದನ್ನು ಅರ್ಥ ಮಾಡಿಕೊಳ್ಳಿ.

ನೀವು ಸಣ್ಣ ಆಗೋಕೆ ಬಯಸಿ, ನಿಜವಾಗಿಯೂ ಪ್ರಯತ್ನ ಮಾಡಿ. ಇದು ಅವರಿವರು ಏನಂತಾರೆ ಅನ್ನೋದಕ್ಕಲ್ಲ. ನಿಮಗೆ ಇಷ್ಟವಿದ್ದು, ಆರೋಗ್ಯದ ಮೇಲೆ ಏನಾದ್ರೂ ಪರಿಣಾಮ ಬೀರ್ತಾ ಇದ್ರೆ ಸಣ್ಣ ಆಗೋಕೆ ಪ್ರಯತ್ನಿಸಿ. ಆದರೆ ಆ ಸಮಯದಲ್ಲಿ ನಿಮ್ಮನ್ನು ನೀವು ಬ್ಲೇಮ್‌ ಮಾಡಿಕೊಳ್ಳಬೇಡಿ.

ದಪ್ಪ ಆಗಿದ್ದೀರಿ ಅನ್ನೋ ಒಂದೇ ಕಾರಣಕ್ಕೆ ಫನ್‌ ಮಿಸ್‌ ಮಾಡಿಕೊಳ್ಳಬೇಡಿ. ಜನ ನೀವು ಎಷ್ಟೇ ಸಣ್ಣ ಆದ್ರೂ ಜಡ್ಜ್‌ ಮಾಡೋದು ನಿಲ್ಲೋದಿಲ್ಲ.

ನಿಮ್ಮ ಫೋಕಸ್‌ನ್ನು ಹೊಸ ಪ್ಲಾನ್ಸ್‌ ಮಾಡೋದ್ರಲ್ಲಿ, ವಾಕ್‌ ಮಾಡೋಕೆ ಇನ್ನಿತರ ಬೇರೆ ಕೆಲಸಗಳಿಗೆ ಶಿಫ್ಟ್‌ ಮಾಡಿಕೊಳ್ಳಿ.

ಜಿಮ್‌ ಹೋಗೋದು ಮನೆಯಲ್ಲಿ ವರ್ಕೌಟ್‌ ಮಾಡೋದು ಪನಿಷ್ಮೆಂಟ್‌ ಅನಿಸುತ್ತಾ? ಇಷ್ಟದ ವರ್ಕೌಟ್‌ ಮಾಡಿ, ಡ್ಯಾನ್ಸ್‌, ಯೋಗ ವಾಕಿಂಗ್‌ ಹೀಗೆ ಬೇರೆ ಏನಾದ್ರೂ ಮಾಡಿ.

ನಿಮ್ಮನ್ನು ನಿಮ್ಮ ದೇಹವನ್ನು ಒಂದೇ ರೀತಿ ನೋಡುವ ಜನರಿಂದ ದೂರ ಇರಿ. ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವ, ಸಪೋರ್ಟ್‌ ಮಾಡುವ ಜನರ ಜೊತೆ ಇರಿ.

ಹಳೇ ಫೋಟೊಗಳನ್ನು ನೋಡಿ ನೊಂದುಕೊಳ್ಳಬೇಡಿ. ಸ್ವಲ್ಪ ಎಫರ್ಟ್‌ ಹಾಕಿ ಮತ್ತೆ ಮೊದಲಿನಂತಾಗಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !