March 9, 2026
Monday, March 9, 2026
spot_img

SHOCKING | ನಿಯಂತ್ರಣ ತಪ್ಪಿ ಉರುಳಿಬಂದ ರಥ, ಮಹಿಳೆಯ ಎರಡೂ ಕಾಲ್‌ ಕಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದ ಜಾತ್ರೆಯ ವೇಳೆ ದುರ್ಘಟನೆಯೊಂದು ನಡೆದಿದೆ.

ಶರಣಬಸವೇಶ್ವರ ಜಾತ್ರೆಯ ವೇಳೆ ರಥ ನಿಯಂತ್ರಣ ಕಳೆದುಕೊಂಡು ಕೆಳಕ್ಕೆ ಬಂದಿದ್ದು, ಮಹಿಳೆಯೊಬ್ಬರ ಎರಡೂ ಕಾಲು ಕತ್ತರಿಸಿಹೋಗಿದೆ.

ಗ್ರಾಮದ ನಿವಾಸಿಯಾದ ನಾಗಮ್ಮ ಎಲ್ಲರಂತೆ ರಥವನ್ನು ನೋಡಲು ಜನರ ಮಧ್ಯೆ ನಿಂತುಕೊಂಡಿದ್ದರು. ಎಲ್ಲರೂ ಉತ್ಸಾಹದಿಂದ ರಥವನ್ನು ಎಳೆಯಲು ಮುಂದಾಗಿದ್ದು, ಜನ ಜಾಸ್ತಿಯಾಗಿದ್ದು, ರಥ ನಿಯಂತ್ರಣಕ್ಕೆ ಸಿಕ್ಕಿಲ್ಲ. ರಥ ಕೈಗೆ ಸಿಗದೇ ಡೌನ್‌ಗೆ ಬಂದಿದೆ. ಕೆಳಗಡೆ ಇದನ್ನು ನೋಡಿದ ಜನ ಓಡಿಹೋಗಿದ್ದಾರೆ. ಆದರೆ ನಾಗಮ್ಮ ತಪ್ಪಿಸಿಕೊಳ್ಳಲು ಆಗಿಲ್ಲ. ರಥ ಅವರ ಕಾಲುಗಳ ಮೇಲೆ ಹರಿದಿದ್ದು, ಕಾಲು ಕತ್ತರಿಸಿ ಗಂಭೀರ ಗಾಯವಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !