ಇಂದಿನ ಬ್ಯುಸಿ ಜೀವನದಲ್ಲಿ ಹೆಚ್ಚಿನ ಲೇಡಿಸ್ ಪೂಜೆ, ಮದುವೆ ಅದು ಇದು ಅಂತ ಕಾರಣ ಹೇಳಿ ಪೀರಿಯಡ್ಸ್ ದಿನಾಂಕವನ್ನು ಮುಂದೂಡಲು ಮಾತ್ರೆಗಳನ್ನು ತಗೋಳೋ ಪ್ರವೃತ್ತಿ ಹೆಚ್ಚಾಗಿದೆ. ವೈದ್ಯರ ಸಲಹೆಯಿಲ್ಲದೆ ಈ ರೀತಿಯ ಹಾರ್ಮೋನ್ ಮಾತ್ರೆಗಳನ್ನು ತೆಗೆದುಕೊಳ್ಳೋದು ಕೆಲವರಿಗೆ ತಾತ್ಕಾಲಿಕವಾಗಿ ಒಳ್ಳೆದು ಅನ್ನಿಸಬಹುದು. ಆದರೆ ಇದರಿಂದ ದೇಹದ ಸಹಜ ಹಾರ್ಮೋನ್ ಸಮತೋಲನಕ್ಕೆ ಅಡ್ಡಿ ಉಂಟಾಗುತ್ತೆ ಅನ್ನೋ ಸತ್ಯ ನೀವೂ ತಿಳ್ಕೊಬೇಕು.
ಪೀರಿಯಡ್ಸ್ ಮುಂದೂಡುವ ಮಾತ್ರೆಗಳು ಸಾಮಾನ್ಯವಾಗಿ ಹಾರ್ಮೋನ್ ಆಧಾರಿತವಾಗಿರುತ್ತವೆ. ಅವು ಗರ್ಭಾಶಯದ ಒಳಪದರದ ಬದಲಾವಣೆಯನ್ನು ತಾತ್ಕಾಲಿಕವಾಗಿ ತಡೆಯುವ ಮೂಲಕ ಮಾಸಿಕ ಚಕ್ರವನ್ನು ವಿಳಂಬಗೊಳಿಸುತ್ತವೆ. ಆದರೆ ಇದನ್ನು ಪದೇಪದೇ ಬಳಸುವುದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಾರೆ.
ಇದನ್ನೂ ಓದಿ:
ಮಾತ್ರೆ ತಗೋಳೋದ್ರಿಂದ ಸೈಡ್ ಎಫೆಕ್ಟ್ಸ್ ನೋಡಿ
- ಹಾರ್ಮೋನ್ ಅಸಮತೋಲನ: ಪದೇಪದೇ ಮಾತ್ರೆ ಸೇವಿಸಿದರೆ ದೇಹದ ಹಾರ್ಮೋನ್ ಸಮತೋಲನ ಬದಲಾಗಬಹುದು.
- ಅನಿಯಮಿತ ಪೀರಿಯಡ್ಸ್: ಮುಂದಿನ ತಿಂಗಳಲ್ಲಿ ಮಾಸಿಕ ಚಕ್ರದಲ್ಲಿ ಬದಲಾವಣೆಯಾಗಬಹುದು.
- ತಲೆನೋವು ಮತ್ತು ವಾಂತಿ: ಕೆಲವರಿಗೆ ತಲೆನೋವು, ವಾಂತಿ ಅಥವಾ ಅಸ್ವಸ್ಥತೆ ಕಾಣಿಸಬಹುದು.
- ತೂಕ ಹೆಚ್ಚಳ: ದೀರ್ಘಕಾಲ ಬಳಸಿದರೆ ತೂಕ ಹೆಚ್ಚಾಗುವ ಸಾಧ್ಯತೆ ಇದೆ.
- ಮೂಡ್ ಸ್ವಿಂಗ್: ಮನಸ್ಥಿತಿ ಏರುಪೇರು ಕಾಣಿಸಿಕೊಳ್ಳಬಹುದು.
ವೈದ್ಯರ ಸಲಹೆ ಯಾಕೆ ಮುಖ್ಯ?
ಪ್ರತಿ ಮಹಿಳೆಯ ದೇಹದ ರಚನೆ ಮತ್ತು ಹಾರ್ಮೋನ್ ಮಟ್ಟ ವಿಭಿನ್ನವಾಗಿರುತ್ತದೆ. ಆದ್ದರಿಂದ ಪೀರಿಯಡ್ಸ್ ಮುಂದೂಡುವ ಮಾತ್ರೆಗಳನ್ನು ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಂತ ಮುಖ್ಯ.
ವಿಶೇಷ ಸಂದರ್ಭಗಳಲ್ಲಿ ವೈದ್ಯರ ಸೂಚನೆಯೊಂದಿಗೆ ಮಾತ್ರ ಈ ರೀತಿಯ ಮಾತ್ರೆಗಳನ್ನು ಬಳಸುವುದು ಉತ್ತಮ. ಆರೋಗ್ಯದ ದೃಷ್ಟಿಯಿಂದ ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಬದಲು ಜಾಗರೂಕತೆ ಅಗತ್ಯ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)



